ಭಾರತದ ವನಿತೆಯರ ತಂಡ ವಿಶ್ವಕಪ್‌ಗೆ ಅಜೇಯ ತೇರ್ಗಡೆ
ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ಕೊಲಂಬೊ, ಫೆ.17: ಭಾರತದ ವನಿತೆಯರ ಕ್ರಿಕೆಟ್ ತಂಡ ಇಲ್ಲಿ ನಡೆದ ವನಿತೆಯರ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ಗೆಲುವಿನ ಅಜೇಯ ಓಟ ಮುಂದುವರಿಸಿದೆ.
ಇದರೊಂದಿಗೆ ಭಾರತ ಸತತ ಆರು ಗೆಲುವಿನೊಂದಿಗೆ ಮುಂದಿನ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಗೆಲುವಿಗೆ 156 ರನ್‌ಗಳ ಸವಾಲನ್ನು ಪಡೆದ ಭಾರತದ ವನಿತೆಯರ ತಂಡ ಇನ್ನೂ 99 ಎಸೆತಗಳನ್ನು ಬಾಕಿ ಉಳಿಸಿ 1 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ಸೇರಿತು.
ಆರಂಭಿಕ ದಾಂಡಿಗ ಮೊನಾ ಮೆಶ್ರಮ್ ಔಟಾಗದೆ 78 ರನ್(92ಎ, 12ಬೌ) ಮತ್ತು ನಾಯಕ್ ಮಿಥಾಲಿ ರಾಜ್ ಔಟಾಗದೆ 73 ರನ್(87ಎ, 10ಬೌ,1ಸಿ) ಗಳಿಸಿದರು.
ಭಾರತ 8.3 ಓವರ್‌ಗಳಲ್ಲಿ 22 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಡಿಬಿ ಶರ್ಮ (1) ಅವರು ಖದೀಜತುಲ್ ಕುಬ್ರಾ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ಪೆವಿಲಿಯನ್ ವಾಪಸಾದರು.
ಎರಡನೆ ವಿಕೆಟ್‌ಗೆ ನಾಯಕಿ ಮಿಥಾಲಿ ರಾಜ್ ಮತ್ತು ಆರಂಭಿಕ ಆಟಗಾರ್ತಿ ಮೊನಾ ಮೆಶ್ರಮ್ ಮುರಿಯದ ಜೊತೆಯಾಟದಲ್ಲಿ 136 ರನ್ ಸೇರಿಸಿದರು.
ಟಾಸ್ ಜಯಿಸಿದ ಭಾರತದ ನಾಯಕಿ ಮಿಥಾಲಿ ರಾಜ್ ಅವರು ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ಬಾಂಗ್ಲಾ ತಂಡ 187 ನಿಮಿಷಗಳ ಬ್ಯಾಟಿಂಗ್‌ನಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತ್ತು.
ಬಾಂಗ್ಲಾ ತಂಡದ ಶರ್ಮಿನ್ ಅಖ್ತರ್ (ಔಟಾಗದೆ 35) ಮತ್ತು ಎಫ್.ಹಕ್ (ಔಟಾಗದೆ 50) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ಭಾರತದ ಮನೀಶ್ ಜೋಶಿ 25ಕ್ಕೆ 3, ದೇವಿಕಾ ವೈದ್ಯ 17ಕ್ಕೆ 2, ಶಿಖಾ ಪಾಂಡ್ಯ ಮತ್ತು ರಾಜೇಶ್ವರಿ ಗಾಯಕ್‌ವಾಡ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ವಿವರ
ಬಾಂಗ್ಲಾದೇಶ ವನಿತೆಯರ ತಂಡ 50 ಓವರ್‌ಗಳಲ್ಲಿ 155/8( ಎಫ್.ಹಕ್ 50, ಶರ್ಮಿನಾ ಅಖ್ತರ್ 35; ಜೋಶಿ 25ಕ್ಕೆ 3, ವೈದ್ಯ 17ಕ್ಕೆ 2).
ಭಾರತದ ವನಿತೆಯರ ತಂಡ 33.3 ಓವರ್‌ಗಳಲ್ಲಿ 158/1(ಮೆಶ್ರಮ್ ಔಟಾಗದೆ 78, ಮಿಥಾಲಿ ರಾಜ್ ಔಟಾಗದೆ 73; ಕುಬ್ರಾ 37ಕ್ಕೆ 1).
ಪಂದ್ಯಶ್ರೇಷ್ಠ : ಮೊನಾ ಮೆಶ್ರಮ್





