ಅಭ್ಯಾಸ ಪಂದ್ಯದಲ್ಲಿ ಸ್ಮಿತ್, ಮಾರ್ಷ್ ಶತಕ
ಭಾರತ ‘ಎ’ ತಂಡದ ದುರ್ಬಲ ಬೌಲಿಂಗ್

ಮುಂಬೈ, ಫೆ.17: ಭಾರತ ‘ಎ’ ತಂಡದ ದುರ್ಬಲ ಬೌಲಿಂಗ್‌ನ ಲಾಭ ಪಡೆದ ಆಸ್ಟ್ರೇಲಿಯದ ದಾಂಡಿಗರು ಇಂದು ಆರಂಭಗೊಂಡ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಚೆನ್ನಾಗಿ ಅಭ್ಯಾಸ ನಡೆಸಿದ್ದಾರೆ. ನಾಯಕ ಸ್ಟೀವ್ ಸ್ಮಿತ್ ಮತ್ತು ಶೇನ್ ಮಾರ್ಷ್ ಶತಕ ದಾಖಲಿಸಿದ್ದಾರೆ.
ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಸ್ಮಿತ್ ಮತ್ತು ಮಾರ್ಷ್ ಶತಕ ದಾಖಲಿಸಿ ಪೆವಿಲಿಯನ್‌ಗೆ ವಾಪಸಾದರು. ಅವರ ಶತಕದ ನೆರವಿನಲ್ಲಿ ಆಸ್ಟ್ರೇಲಿಯ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 327 ರನ್ ಗಳಿಸಿದೆ.
ಆಟ ನಿಂತಾಗ ಮಿಚೆಲ್ ಮಾರ್ಷ್ 16 ರನ್ ಮತ್ತು ಮ್ಯಾಥ್ಯೂ ವೇಡ್ ಔಟಾಗದೆ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಭಾರತ ‘ಎ’ ತಂಡದ ಮಧ್ಯಮ ವೇಗಿ ನವದೀಪ್ ಸೈನಿ ದಾಳಿಗೆ ಸಿಲುಕಿ ಆರಂಭಿಕ ದಾಂಡಿಗರಾದ ಡೇವಿಡ್ ವಾರ್ನರ್ (25) ಮತ್ತು ಮ್ಯಾಥ್ಯೂ ರೆನ್‌ಷಾ (11) ಅವರನ್ನು ಆಸ್ಟ್ರೇಲಿಯ ಕಳೆದುಕೊಂಡಾಗ ಸ್ಕೋರ್ 16.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 55 ಆಗಿತ್ತು. ಮೂರನೆ ವಿಕೆಟ್‌ಗೆ ಮಾರ್ಷ್ ಮತ್ತು ಸ್ಮಿತ್ ಭಾರತದ ಬೌಲರ್‌ಗಳ ಬೆವರಿಳಿಸಿದರು.ಇವರು ಜೊತೆಯಾಟದಲ್ಲಿ 156 ರನ್ ಸೇರಿಸಿದರು. ಸ್ಮಿತ್ 199 ನಿಮಿಷಗಳ ಬ್ಯಾಟಿಂಗ್‌ನಲ್ಲಿ 161 ಎಸೆತಗಳನ್ನು ಎದುರಿಸಿದರು.12 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 107 ರನ್ ಗಳಿಸಿದರು. ಇದು ಅವರ 30ನೆ ಪ್ರಥಮ ದರ್ಜೆ ಕ್ರಿಕೆಟ್ ಶತಕ. ತಂಡದ ಸ್ಕೋರ್‌ನ್ನು 60ಓವರ್‌ಗಳಲ್ಲಿ 211ಕ್ಕೆ ತಲುಪಿಸಿದರು.
ಮಾರ್ಷ್ 225 ನಿಮಿಷಗಳ ಬ್ಯಾಟಿಂಗ್‌ನಲ್ಲಿ 173 ಎಸೆತಗಳನ್ನು ಎದುರಿಸಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 104 ರನ್ ಸೇರಿಸಿದರು. ಮಾರ್ಷ್ 21ನೆ ಪ್ರಥಮ ದರ್ಜೆ ಶತಕ ದಾಖಲಿಸಿದ ಬಳಿಕ ಅವರು ಬ್ಯಾಟಿಂಗ್‌ನ್ನು ನಿಲ್ಲಿಸಿದರು.
ಪೀಟರ್ ಹ್ಯಾಂಡ್ಸ್‌ಕಂಬ್ 45 ರನ್ ಗಳಿಸಿ ಔಟಾದರು.
ಭಾರತ ‘ಎ’ ತಂಡದ ಸೈನಿ 27ಕ್ಕೆ 2 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 64ಕ್ಕೆ 1 ವಿಕೆಟ್ ಪಡೆದರು. ಅಶೋಕ್ ದಿಂಡಾ, ಶಹಬಾಝ್ ನದೀಂ, ಶ್ರೇಯಸ್ ಅಯ್ಯರ್, ಅಖಿಲ್ ಹೆರ್ವಾಡ್ಕರ್ ಮತ್ತು ಪ್ರಿಯಾಂಕ್ ಪಾಂಚಾಲ್ ಕೈ ಸುಟ್ಟುಕೊಂಡರು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್
90 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 327
ವಾರ್ನರ್ ಸಿ ಕಿಶಾನ್ ಬಿ ಸೈನಿ25
ಎಂ ರೆನ್‌ಶಾ ಸಿ ಕಿಶಾನ್ ಬಿ ಸೈನಿ11
ಎಸ್.ಸ್ಮಿತ್ ಗಾಯಾಳು ನಿವೃತ್ತಿ107
ಎಸ್ ಮಾರ್ಷ್ ಗಾಯಾಳು ನಿವೃತ್ತಿ104
ಪಿ.ಹ್ಯಾಂಡ್ಸ್‌ಕಂಬ್ ಸಿ ಪಾಂಚಾಲ್ ಪಾಂಡ್ಯ45
ಎಂ.ಮಾರ್ಷ್ ಔಟಾಗದೆ16
ಎಂ.ವೇಡ್ ಔಟಾಗದೆ07
ಇತರೆ12
ವಿಕೆಟ್ ಪತನ: 1-33, 2-55, 3-211, 4-290, 5-305
ಬೌಲಿಂಗ್ ವಿವರ
ಎ ದಿಂಡಾ15.2-1-49-0
ಎಚ್.ಪಾಂಡ್ಯ17.0-3-64-1
ಎನ್. ಸೈನಿ12.4-4-27-2
ಎಸ್.ನದೀಮ್23.0-0-90-0
ಹೆರ್ವಾಡ್ಕರ್11.0-0-48-0
ಎಸ್.ಎಸ್.ಅಯ್ಯರ್07.0-0-32-0
ಪಿ. ಪಾಂಚಾಲ್04.0-0-11-0





