ಮಹಾವೀರ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಮೂಡುಬಿದಿರೆ, ಫೆ.18: ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ತೃತೀಯ ಬಿ.ಕಾಂ. ವಿದ್ಯಾರ್ಥಿಗಳಿಗಾಗಿ ವೃತ್ತಿ ಜೀವನ ಮಾರ್ಗದರ್ಶನ ಮತ್ತು ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಚೆನ್ನೈನ ಐ ಡ್ರೀಮ್ಸ್ ಕೇರಿಯರ್ ಅಕಾಡಮಿಯ ಸೋಮನ್ ನಂಬಿಯಾರ್ ಮತ್ತು ಶಶಿರಂಜನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಹಾಗೂ ಸಂಘದ ಸಂಯೋಜಕ ಡಾ. ಬಿ. ವಾಮನ ಬಾಳಿಗ ಸ್ವಾಗತಿಸಿದ್ದು, ತೃತೀಯ ಬಿ.ಕಾಂನ ಜೋಸ್ವಿನ್ ಡಿಸೋಜಾ ವಂದಿಸಿ, ರಮ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು.
Next Story





