ವರ್ಣೋಬವ ಪ್ರತಿಭೋತ್ಸವದೊoದಿಗೆ ಅಲ್ ಕೋಬಾರ್ ಕೆಸಿಎಫ್ ಡೇ ಸಮಾರೋಪ

ಅಲ್ ಕೋಬಾರ್, ಫೆ.18: ಅಲ್ ಕೋಬಾರ್ ಸೆಕ್ಟರ್ ಮಟ್ಟದ ಪ್ರತಿಭೋತ್ಸವ ಮತ್ತು ಅಸ್ಸುಫ್ಫ ಎರಡನೆ ಹಂತ ಉದ್ಘಾಟನೆ ಕೆಸಿಎಫ್ ಡೇ ಪ್ರಯುಕ್ತ ನಗರದ ಹೋಟೆಲ್ ದರ್ಬಾರ್ ಆಡಿಟೋರಿಯಂನಲ್ಲಿ ನಡೆಯಿತು. ಮುಹಮ್ಮದ್ ಮುದ್ರಿಕ ಮದನಿ ದುವಾಃ ನೇತೃತ್ವ ವಹಸಿದ್ದರು. ಮುಹಮ್ಮದ್ ಸಅದಿ ಆದೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅನಿವಾಸಿ ಧಾರ್ಮಿಕ ಭೋಧನೆ ಅಸ್ಸುಫ್ಫ ತರಗತಿಯ ಎರಡನೆ ಹಂತದ ಕುರಿತು ಅಬ್ದುರ್ರಶೀದ್ ಸಖಾಫಿ ಮಾತನಾಡಿದರು. ಝೈನುದ್ದೀನ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಿದರು. ಸೆಕ್ಟರ್ ಅಧ್ಯಕ್ಷ ಅಬ್ದುರ್ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಹನೀಫ್ ಸಖಾಫಿ ಕಾಯಾರ್, ಅಬ್ದುಲ್ ಲತೀಫ್ ಮದನಿ ಕಾಜೂರ್, ಅಬೂಬಕ್ಕರ್ ಹಾಜಿ ಕೆ.ಸಿ.ರೋಡು ಉಪಸ್ಥಿತರಿದ್ದರು.
ಸೆಕ್ಟರ್ ಅಧೀನದ ಶಮಾಲಿಯ, ಬಯೋನಿಯ, ರಾಖಾ, ಅಕ್ರಬೀಯ ಯುನಿಟ್ ಕಾರ್ಯಕರ್ತರು ಭಾಗವಹಿಸಿದ್ದರು. ಜೂನಿಯರ್ ಮತ್ತು ಸೀನಿಯರ್ ವಿಭಾಗ ದ ಪ್ರತಿಭೋತ್ಸವ ವೇದಿಕೆಯಲ್ಲಿ ನಡೆಯಿತು. ಪ್ರತಿಭೆ ಗಳಿಗೆ ಸನ್ಮಾನ ವಿತರಣೆ ಮತ್ತು ಕೆಸಿಎಫ್ ಅಸ್ಸುಫ್ಫ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಇಬ್ರಾಹೀಮ್ ವಲವೂರು ಸ್ವಾಗತಿಸಿ ಮುಹಮ್ಮದ್ ಮಲೆಬೆಟ್ಟು ವಂದಿಸಿದರು.





