ಅಮೆರಿಕ ಯುವತಿಗೆ ಕಿರುಕುಳ ಪ್ರಕರಣ: ಭಾರತೀಯನಿಂದ ತಪ್ಪೊಪ್ಪಿಗೆ

ವಾಷಿಂಗ್ಟನ್,ಫೆ. 18: ವಿಮಾನದಲ್ಲಿ ಅಮೆರಿಕದ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ 58ವರ್ಷ ವಯಸ್ಸಿನ ಭಾರತೀಯ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ವಿಶಾಖಪಟ್ಟಣಂ ನಿವಾಸಿಯಾದ ವೀರಭದ್ರರಾವ್ ಕುನಂ ಆರೋಪವನ್ನು ಒಪ್ಪಿಕೊಂಡಿರುವ ವ್ಯಕ್ತಿಯಾಗಿದ್ದಾನೆ.
ಕಳೆದ ವರ್ಷ ಜುಲೈ 30ರಂದು ಲಾಸ್ ಏಂಜೆಲ್ಸ್‌ನಿಂದ ನ್ಯೂಜರ್ಸಿಗೆ ಬಂದ ವಿಮಾನದಲ್ಲಿ ಮಧ್ಯದ ಸೀಟ್‌ನಲ್ಲಿ ಅಮೆರಿಕನ್ ಯುವತಿ ಕುಳಿತಿದ್ದಳು. ವಿಮಾನ ಹಾರತೊಡಗಿದಾಗ ನಿದ್ದೆಗೆ ಜಾರಿದ ಯುವತಿಯ ಮೈಯನ್ನು ಈತ ಸವರಿದ್ದಾನೆ ಎಂದು ವರದಿಯಾಗಿದೆ.
ನಂತರ ಯುವತಿ ಬೊಬ್ಬೆ ಹೊಡೆದಿದ್ದಳು. ಸಹಪ್ರಯಾಣಿಕರು ಬಂದು ಸೇರಿದ್ದರು. ನಂತರ ವಿಮಾನ ನ್ಯೂಯಾರ್ಕ್‌ನಲ್ಲಿ ಇಳಿದಾಗ ಈತನನ್ನು ಬಂಧಿಸಲಾಗಿತ್ತು. ಎಫ್‌ಬಿಐ ವಶದಲ್ಲಿ 60ದಿವಸ ಈತನ ವಿಚಾರಣೆ ನಡೆಸಿತ್ತು. ನಂತರ 90ದಿವಸ ಮದ್ಯಪಾನ ವ್ಯಸನ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಕಳೆದ ತಿಂಗಳು 22ಕ್ಕೆ ನ್ಯೂಯಾರ್ಕ್ ಫೆಡರಲ್ ಕೋರ್ಟು ರಾವ್‌ನನ್ನು ಶಿಕ್ಷಿಸಿದೆ ಎಂದು ವರದಿಯಾಗಿದೆ.
Next Story





