ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ಕರ್ನಾಟಕ ಶಾಖೆಯ 4ನೆ 'ಕನಸಿನ ಮನೆ'ಯ ಕೀಲಿ ಕೈ ಹಸ್ತಾಂತರ

ಮಂಗಳೂರು, ಫೆ.18: ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆ.ಕೆ.ಎಂ.ಏ) ಕರ್ನಾಟಕ ಶಾಖೆಯು ಹೈಲ್ಯಾಂಡ್ ಇಸ್ಲಾಮಿಕ್ ಫಾರಂ (HIF) ಸಾಮಾಜಿಕ ಸಂಘಟನೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ವಸತಿ ರಹಿತರಿಗೊಂದು ವಸತಿ ಯೋಜನೆಯ "ಕನಸಿನ ಮನೆ 4" ರ ಕೀಲಿ ಕೈಯನ್ನು ಎಸ್.ಎಂ. ರಶೀದ್ ಹಾಜಿ (ಚೆರ್ಮಾನ್ ಮತ್ತು ಸ್ಥಾಪಕಾಧ್ಯಕ್ಷರು DKMA, ಸ್ಥಾಪಕಾಧ್ಯಕ್ಷರು BBCI) ರವರು ಪಾವೂರು, ಹರೇಕಳದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಪ್ಲಾಸ್ಟಿಕ್ ಗುಡಿಸಲಿನಲ್ಲಿ ವಾಸಿಸುತ್ತಿದ್ದ ವಿಧವೆಯ ಅನಾಥ ಕುಟುಂಬಕ್ಕೆ ಹಸ್ತಾಂತರಿಸಿದರು.
ಕೇರಳ ಹಾಗೂ ಕರ್ನಾಟಕದ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿದ ಸದಸ್ಯ ಬಲವನ್ನು ಹೊಂದಿರುವ ಬ್ರಹತ್ ಅನಿವಾಸಿ ಸಂಘಟನೆಯಾಗಿರುತ್ತದೆ ಕೆ.ಕೆ.ಎಂ.ಏ. ಎಂದೇ ಪ್ರಸಿದ್ದಿ ಹೊಂದಿರುವ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್. ಇದರ ಕರ್ನಾಟಕ ಶಾಖೆಯು ವಿದ್ಯಾರ್ಥಿ ವೇತನ, ಕಿಡ್ನಿ ಡಯಾಲಿಸಿಸ್ ಸೆಂಟರ್, ಕುಡಿಯುವ ನೀರಿನ ಯೋಜನೆ, ಕಿಡ್ನಿ ರೋಗಿಗಳಿಗೆ ಧನ ಸಹಾಯ, ಮುಂತಾದ ಸಾಮುದಾಯಿಕ ಹಾಗೂ ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದಿರುತ್ತದೆ.
ಇದರ ವಸತಿ ರಹಿತರಿಗೊಂದು ವಸತಿ "ಕನಸಿನ ಮನೆ" ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ದಾನಿಗಳ ನೆರವಿನಿಂದ ಈಗಾಗಲೇ ಮೂರು ಮನೆಗಳನ್ನು ಉಪ್ಪಿನಂಗಡಿ ಸಮೀಪದ ಆತೂರು, ಉಳ್ಳಾಲಬೈಲ್ ಹಾಗೂ ಚಾರ್ಮಾಡಿಯ ಕೊಂಡೋಡಿಯಲ್ಲಿ ನಿರ್ಮಿಸಿ ಕೊಟ್ಟಿರುತ್ತದೆ. ಕನಸಿನ ಮನೆ 5, 6, 7 ಕ್ರಮಾವಾಗಿ ಬಿ.ಸಿ. ರೋಡಿನ ತಾಳಿಪಡ್ಪು, ಬಜಾಲ್ ಹಾಗೂ ಮುಲರಪಟ್ಟಣಗಳಲ್ಲಿ ನಿರ್ಮಾಣಕಾರ್ಯವು ಪ್ರಗತಿಯಲ್ಲಿರುವವು.
ಕನಸಿನ ಮನೆ ಕೀಲಿ ಕೈ ಕಾರ್ಯಕ್ರಮದಲ್ಲಿ ಜನಾಬ್. ನಾಝಿಮ್ ಎಸ್.ಎಸ್. (ಅಧ್ಯಕ್ಷರು HIF), ಜನಾಬ್. ಸೈಫ್ ಸುಲ್ತಾನ್ (ಅಧ್ಯಕ್ಷರು. HOPE), ಜನಾಬ್. ಎಸ್.ಎಂ. ಬಾಷ (ಚೆರ್ಮಾನ್ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್), ಜನಾಬ್. ಅಬ್ದುಲ್ ಜಬ್ಬಾರ್ (ಅಧ್ಯಕ್ಷರು. ರೆಸ್ಕ್ಯೂ ಚಾರಿಟೇಬಲ್ ಟ್ರಸ್), ಕೆ.ಕೆ.ಎಂ.ಏ. ಇದರ ಸಕ್ರಿಯ ಕಾರ್ಯಕರ್ತ ಜನಾಬ್. ಅಬೂಬಕ್ಕರ್ (ಪುತ್ತುಬಾವ) ಪಾಣೆಮಂಗಳೂರು ನಂದಾವರ, ಜನಾಬ್. ಅಸ್ಲಾಂ ಉಸ್ತಾದ್, ಖತೀಬರು ಇಹ್ಸಾನ್ ಮಸೀದಿ) ಮತ್ತು HIF ಇದರ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು , ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ HIF ನ ವತಿಯಿಂದ ಸ್ಥಳೀಯ ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿ ಮತ್ತು ಆಟಿಕೆಗಳನ್ನು ವಿತರಿಸಲಾಯಿತು.
ಜನಾಬ್. ಅಸ್ಲಾಂ ಉಸ್ತಾದ್ ರವರು ದುವಾ ಆಶೀರ್ವಚನ ನೆರೆವೇರಿಸಿದರು.
ಕೀಲಿ ಕೈ ಹಸ್ತಾಂತರ ಕಾರ್ಯಕ್ರಮದ ನೇತೃತ್ವವನ್ನು ಕೆ.ಕೆ.ಎಂ.ಏ. ಕರ್ನಾಟಕ ಶಾಖೆಯ ರಾಜ್ಯ ಸಂಚಾಲಕರಾದ ಜನಾಬ್. ಯಸ್. ಎಂ. ಫಾರೂಕ್ ಅವರು ವಹಿಸಿದರು.







