5ಲಕ್ಷಕ್ಕೂ ಹೆಚ್ಚು ಹಣ ಠೇವಣಿಯಿಟ್ಟ 11 ಲಕ್ಷ ಮಂದಿ ಮೌನಕ್ಕೆ ಶರಣು!

ಹೊಸದಿಲ್ಲಿ,ಫೆ. 18: ನೋಟು ಅಮಾನ್ಯಗೊಳಿಸಿದ ಬಳಿಕ 5ಲಕ್ಷ ರೂಪಾಯಿಗೂ ಹೆಚ್ಚುಠೇವಣಿಯಿರಿಸಿದ 11 ಲಕ್ಷ ಖಾತೆಗಳು ಸಂದೇಹದ ಮೊನೆಯಲ್ಲಿ ಸಿಲುಕಿ ನಿಂತಿವೆ.
ಠೇವಣಿದಾರರಿಗೆ ವಿವರವನ್ನು ಬಹಿರಂಗಪಡಿಸಬೇಕೆಂದು ಆದಾಯತೆರಿಗೆ ಇಲಾಖೆ ಕಳುಹಿಸಿದ ಇಮೇಲ್ ಸಂದೇಶಕ್ಕೆ ಖಾತೆ ಹೋಲ್ಡರ್‌ಗಳು ಉತ್ತರಿಸಿಲ್ಲ.ನವೆಂಬರ್ 8ರಿಂದ 50ದಿವಸಗಳೊಳಗೆ ಐದುಲಕ್ಷ ರೂಪಾಯಿಗೂ ಹೆಚ್ಚು ಹಣ ಠೇವಣಿ ಇಟ್ಟ 18 ಲಕ್ಷ ಖಾತೆಗಳು ಇದ್ದವು. ಈ ಠೇವಣಿ ಒಟ್ಟು ನಾಲ್ಕೂವರೆ ಲಕ್ಷ ಕೋಟಿರೂಪಾಯಿಯಾಗುತ್ತದೆ.
ವಿವರವನ್ನು ನೀಡಿ ಎಂದು ಇವರೆಲ್ಲರಿಗೂ ಸಂದೇಶ ಕಳುಹಿಸಿದರೂ ಏಳು ಲಕ್ಷ ಮಂದಿ ಮಾತ್ರವೇ ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಶೇ.99 ಮಂದಿ ಠೇವಣೆಯನ್ನು ನಾವೇ ಹೂಡಿದವರೆಂದು ದೃಢೀಕರಿಸಿದ್ದಾರೆ.
ಉಳಿದ 11 ಲಕ್ಷ ಮಂದಿಯಲ್ಲಿ ಐದು ಲಕ್ಷ ಮಂದಿ ಈವರೆಗೂ ಆದಾಯ ತೆರಿಗೆ ಇಲಾಖೆಯ ಲೆಕ್ಕಕ್ಕೆ ಸೇರಿದವರೇ ಅಲ್ಲ. ಉತ್ತರಿಸಿದ ಠೇವಣಿದಾರರಿಗೆ ಆದಾಯ ಇಲಾಖೆ ಇನ್ನೊಮ್ಮೆ ಇಮೇಲ್ ಕಳುಹಿಸಿ ಅದಕ್ಕೂ ಪ್ರತಿಕ್ರಿಯಿಸದಿದ್ದರೆ ಮುಂದಿನ ಕ್ರಮಕೊಗೊಳ್ಳಲಿದೆ ಎಂದು ವರದಿ ತಿಳಿಸಿದೆ.
Next Story





