ಕೊಲ್ಯ: ರೈಲು ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಉಳ್ಳಾಲ, ಫೆ.18: ಕೇರಳದಿಂದ-ಮಂಗಳೂರಿನ ಕಡೆಗೆ ಚಲಿಸುತ್ತಿದ್ದ ರೈಲನ್ನು ದಾರಿ ಮಧ್ಯದ ಕೊಲ್ಯದಲ್ಲಿ ರೈಲು ಹಳಿಗಳ ದುರಸ್ಥಿಗಾಗಿ ಶನಿವಾರ ಮಧ್ಯಾಹ್ನ ಸಮಾರು ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ನಿಲ್ಲಿಸಲಾಯಿತು.
ರೈಲಿನ ಸಂಚಾರವನ್ನು ಸ್ಥಗಿತಗೊಳಿಸಿದ ಪರಿಣಮ ರೈಲಿನಲ್ಲಿ ಪ್ರಯಣಿಸುತ್ತಿದ್ದ ಪ್ರಯಾಣಿಕರು ಕಾದು ಕಾದು ಒಂದೆಡೆ ಸುಸ್ತಾದರೆ ಇನ್ನೊಂದೆಡೆ ಕೊಲ್ಯ ಭಾಗದಲ್ಲಿ ನಡೆದುಕೊಂಡು ಹೋಗುವ ಶಾಲಾ ವಿದ್ಯಾರ್ಥಿಗಳು ದಾಟುವ ಹಾದಿಯಲ್ಲೇ ರೈಲು ನಿಂತಿದ್ದರಿಂದ ವಿದ್ಯಾರ್ಥಿಗಳು ಸ್ವಲ್ಪ ಹೊತ್ತು ಸಂಕಷ್ಟ ಎದುರಿಸಬೇಕಾಯಿತು.
Next Story





