ಮಂಗಳೂರು: ಫೆ.20ರಂದು ಸಲಫಿ ಮಹಿಳಾ ಸಮಾವೇಶ
ಮಂಗಳೂರು, ಫೆ.18: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಸಲಫಿ ಗರ್ಲ್ಸ್ ಆಂಡ್ ವಿಮೆನ್ಸ್ ಮೂವ್‍ಮೆಂಟ್ ಮತ್ತು ದಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ. 20ರಂದು ಅಪರಾಹ್ನ 2:30 ಕ್ಕೆ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ಸಲಫಿ ಮಹಿಳಾ ಸಮಾವೇಶವು ಜರಗಲಿದೆ.
ಈ ಸಮಾವೇಶದಲ್ಲಿ ಕೇರಳ ರಾಜ್ಯ ಮುಜಾಹಿದ್ ಗರ್ಲ್ಸ್ ಆಂಡ್ ವಿಮೆನ್ಸ್ ಮೂವ್‍ಮೆಂಟ್ ನ ಪ್ರಧಾನ ಕಾರ್ಯದರ್ಶಿ ಶಮೀಮ ಇಸ್ಲಾಹಿಯ್ಯರವರು ಪ್ರಮುಖ ಭಾಷಣ ಮಾಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.
Next Story





