ಮಾದಕ ದ್ರವ್ಯದ ವಿರುದ್ಧ ಸಮರ ಸಾರೋಣ: ನೌಶಾದ್ ಬಾಖವಿ
ಸುನ್ನಿ ಸಂದೇಶ ಪತ್ರಿಕೆಯ 15ನೆ ವಾರ್ಷಿಕೋತ್ಸವ ಸಮಾರಂಭ

ಮಂಗಳೂರು, ಫೆ.18: ಕುಟುಂಬ ಮತ್ತು ಸಮಾಜವನ್ನು ಛಿದ್ರಗೊಳಿಸುವ, ಮನುಷ್ಯತ್ವಕ್ಕೆ ಅಪಚಾರ ಎಸಗುವ ಮಾದಕ ದ್ರವ್ಯವು ಯುವ ಜನಾಂಗದ ಸರ್ವನಾಶಕ್ಕೆ ಕಾರಣವಾಗುತ್ತಿವೆ. ಸತ್ಯದ ಪಥದಲ್ಲಿ ಸಾಗಬೇಕಾದ ಯುವಕರು ಮಾದಕ ದ್ರವ್ಯದ ದಾಸರಾಗಿ ಕುಟುಂಬ, ಸಮಾಜ, ಧರ್ಮದ ಅಧಃಪತನಕ್ಕೆ ಕಾರಣವಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಾಜದ ಪ್ರಜ್ಞಾವಂತ ನಾಗರಿಕರು ಮಾದಕ ದ್ರವ್ಯದ ವಿರುದ್ಧ ಸಮರ ಸಾರುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ, ಯುವ ವಿದ್ವಾಂಸ ಎ.ಎಂ. ನೌಶಾದ್ ಬಾಖವಿ ಹೇಳಿದರು.
ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕಿಸಾ) ಹೊರತರುವ ಸುನ್ನಿ ಸಂದೇಶ ಮಾಸಪತ್ರಿಕೆಯ 15ನೆ ವಾರ್ಷಿಕೋತ್ಸವದ ಪ್ರಯುಕ್ತ ಮಾದಕ ದ್ರವ್ಯದ ವಿರುದ್ಧ ಜನಾಂದೋಲನ ಕಾರ್ಯಕ್ರಮದ ಅಂಗವಾಗಿ ನಗರದ ನೆಹರು ಮೈದಾನದ ಶೈಖುನಾ ಕೋಟುಮಲ ಬಾಪು ಉಸ್ತಾದ್ ವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಬೃಹತ್ ಸಮಾವೇಶದಲ್ಲಿ 'ಯುವತ್ವ' ಎಂಬ ವಿಷಯದಲ್ಲಿ ಅವರು ಮುಖ್ಯಪ್ರಭಾಷಣಗೈದರು.
ಮಾದಕ ದ್ರವ್ಯದ ಪ್ರಶ್ನೆ ಬಂದಾಗ 'ಧರ್ಮ'ಗಳು ಚರ್ಚೆಗೊಳಗಾಗಬಾರದು. ಎಳೆಯ ಪ್ರಾಯದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡುವ ಮೂಲಕ ಅವರನ್ನು ಲಹರಿ ಮುಕ್ತಗೊಳಿಸಬೇಕಾಗಿದೆ ಎಂದು ನೌಶಾದ್ ಬಾಖವಿ ನುಡಿದರು.
ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುಆಗೈದರು. ಸಮಸ್ತ ದಕ್ಷಿಣ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಅಲ್‌ಹಾಜ್ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಿದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎ.ಎಚ್. ನೌಶಾದ್ ಹಾಜಿ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಝಕರಿಯಾ ಅಲ್ ಮುಝೈನ್ ಜೋಕಟ್ಟೆ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಉದ್ಯಮಿ ರಾಜೇಶ್ ನಾಯಕ್ ಉಳೆಪಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತ್ರಾಡಿ ಖಾಝಿ ವಿ.ಕೆ. ಅಬೂಬಕರ್ ಮುಸ್ಲಿಯಾರ್, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೈಯದ್ ಅಮೀರ್ ತಂಙಳ್ ಕಿನ್ಯ, ಕೆ.ಎಂ. ಉಸ್ಮಾನ್ ಫೈಝಿ ತೋಡಾರು, ಶಾಸಕ ಬಿ.ಎ.ಮೊಯ್ದಿನ್ ಬಾವಾ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಡಾ.ಯು.ಟಿ. ಇಫ್ತಿಕಾರ್, ಹಾಜಿ ಶರೀಫ್ ವೈಟ್‌ಸ್ಟೋನ್ ಜೋಕಟ್ಟೆ, ಹಾಜಿ ಕೆ.ಎಸ್. ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಜಿ. ಅಬೂಬಕರ್ ಗೋಳ್ತಮಜಲು, ಉದ್ಯಮಿಗಳಾದ ಬಿ.ಎಂ. ಫಾರೂಕ್, ಬಿ.ಎಂ. ಮುಮ್ತಾಝ್ ಅಲಿ, ಹಾಜಿ ಕೆ.ಎಂ. ಇಬ್ರಾಹೀಂ ಬಾಖವಿ ಕೆ.ಸಿ. ರೋಡು, ಕೆ.ಎಂ. ಶರೀಫ್ ಫೈಝಿ ಕಡಬ, ಹಾಜಿ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಹಾಜಿ ಬೆಳ್ಳಾರೆ, ಹಾಜಿ ಐ. ಮೊಯ್ದಿನಬ್ಬ ಮಂಗಳೂರು, ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ಅಝೀಝ್ ದಾರಿಮಿ ಕಲ್ಲೇಗ, ಅಬ್ದುಲ್ ಹಮೀದ್ ಹಾಜಿ ಗೋಲ್ಡನ್ ಕಲ್ಲಡ್ಕ, ಅಬ್ದುರ್ರವೂಫ್ ಪುತ್ತಿಗೆ, ಮುಸ್ತಫಾ ಕೆಂಪಿ, ಇಬ್ರಾಹೀಂ ಹಾಜಿ ಮದೀನಾ, ಇಕ್ಬಾಲ್ ಬಾಳಿಲ, ಆಸೀಫ್ ಇಕ್ಬಾಲ್ ಮುಲ್ಕಿ, ಎನ್.ಎಸ್. ಅಬ್ಬಾಸ್ ಹಾಜಿ, ಹನೀಫ್ ಹಾಜಿ ಬಂದರ್, ಮದರ್ ಇಂಡಿಯಾ ಲತೀಫ್, ಏರ್ ಇಂಡಿಯಾ ಉಸ್ಮಾನ್, ಇಸಾಕ್ ಹಾಜಿ ತೋಡಾರ್, ಸಿರಾಜ್ ಮೂಡಿಗೆರೆ, ಮುನೀರ್ ಅಹ್ಮದ್ ಶಿರಸಿ ಎಚ್‌ಕೆಎಚ್, ಅಬ್ದುಲ್ ಮಜೀದ್ ಸಿತಾರ್, ಹಾಜಿ ಎಂ.ಎ. ಅಬ್ದುಲ್ಲ ರೆಂಜಾಡಿ, ಹಾಜಿ ಇಬ್ರಾಹೀಂ ಕೊಂಬಕುದಿ, ನೂರುದ್ದೀನ್ ಸಾಲ್ಮರ, ಮುಹಮ್ಮದ್ ಮೋನು, ಮೆಟ್ರೋ ಶಾಹುಲ್ ಹಮೀದ್, ಫಿಶ್‌ಮೋನು ಮೂಡಿಗೆರೆ, ಟಿ.ಎಂ. ಶಹೀದ್, ಇ.ಕೆ. ರಫೀಕ್ ಕಣ್ಣೂರು, ಅಬ್ದುಲ್ ಹಮೀದ್ ಕಣ್ಣೂರು, ಸೈಯದ್ ಬಾಷಾ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.
ಕಿಸಾ ಸಂಘಟನಾ ಕಾರ್ಯದರ್ಶಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಕಿರಾಅತ್ ಪಠಿಸಿದರು. ಕಿಸಾ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ದಿಕ್ಸೂಚಿ ಭಾಷಣಗೈದರು. ಸುನ್ನಿ ಸಂದೇಶ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಕೆ.ಎಸ್. ಹೈದರ್ ದಾರಿಮಿ ಕಲ್ಲಡ್ಕ ಪ್ರಾಸ್ತಾವಿಕ ಭಾಷಣಗೈದರು. ಸುನ್ನಿ ಸಂದೇಶ ಮಾಸಿಕದ ಸಂಪಾದಕ ಕೆ.ಎಂ.ಸಿದ್ದೀಕ್ ಫೈಝಿ ಕರಾಯ ವಂದಿಸಿದರು. ನೌಫಾಲ್ ಕುಡ್ತಮುಗೇರು, ರಫೀಕ್ ಮಾಸ್ಟರ್, ಕೆ.ಐ.ಮುಸ್ತಫಾ ಫೈಝಿ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.







