ಲೋಹದ ಹಕ್ಕಿಗಳ ಆಕರ್ಷಕ ಬೆರಗು-ಬಿನ್ನಾಣಕ್ಕೆ ವಿಧ್ಯುಕ್ತ ತೆರೆ..!
ಐದು ದಿನಗಳಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ವೈವಿಧ್ಯಮಯ ಕಸರತ್ತಿನ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದ ಲೋಹದ ಹಕ್ಕಿಗಳ ಆಕರ್ಷಕ ‘ಏರೋ ಇಂಡಿಯಾ’ 11ನೆ ವೈಮಾನಿಕ ಪ್ರದರ್ಶನಕ್ಕೆ ಶನಿವಾರ ತೆರೆಬಿದ್ದಿದೆ. ತೇಜಸ್ಸು, ಸುಖೋಯ್, ಧ್ರುವ, ಚೀತಾ, ರುದ್ರ, ಅತ್ಯಾಧುನಿಕ ಹಾಕ್-ಐ ಸೂರ್ಯಕಿರಣ್, ಎಂಬೆರೆರ್, ಎಲ್‌ಸಿಎ ಸೇರಿದಂತೆ ಹತ್ತಾರು ಯುದ್ಧ ವಿಮಾನಗಳ ರೋಮಾಂಚನಕಾರಿ ದೃಶ್ಯಕಲೆಯನ್ನು ದೇಶ-ವಿದೇಶಗಳ ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ವೈಮಾನಿಕ ಪ್ರದರ್ಶನದಲ್ಲಿ ದೇಶೀಯ ನಿರ್ಮಿತ ತೇಜಸ್ಸು, ಭಾರತೀಯ ವಾಯುಪಡೆಯ ಬೆನ್ನೆಲುಬು ಸುಖೋಯ್, ರಫಾಯಲ್, ಎಫ್-16 ಸೇರಿದಂತೆ ಇನ್ನಿತರ ಯುದ್ಧ ವಿಮಾನಗಳು ಶಕ್ತಿ-ಸಾಮರ್ಥ್ಯವನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿವೆ.
Next Story





