ಪೈವಳಿಕೆ: ಇಂದಿನಿಂದ ಪೈಯಕ್ಕಿ ಉಸ್ತಾದ್ ಉರೂಸ್
ಮಂಜೇಶ್ವರ, ಫೆ.18: ಪೈವಳಿಕೆ ಜುಮಾ ಮಸೀದಿ ಮರ್ಹೂಂ ಪೈಯಕ್ಕಿ ಉಸ್ತಾದ್ ಉರೂಸ್ ಫೆ.19ರಿಂದ 26ರವರೆಗೆ ನಡೆಯಲಿದೆ ಎಂದು ಜಮಾಅತ್ ಸಮಿತಿ ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
19ರ ಬೆಳಗ್ಗೆ 10ಕ್ಕೆ ಅಬ್ದುಲ್ಲಾ ತಂಙಳ್ ದ್ವಜಾರೋಹಣಗೈಯುವರು. ಅಬ್ದುಲ್ಲಾ ಕುಂಞಿ ಉಸ್ತಾದ್ ಪೈವಳಿಕೆ ಝಿಯಾರತ್‌ಗೆ ನೇತೃತ್ವ ನೀಡುವರು. ಬಳಿಕ ಮಜ್ಲಿಸುನ್ನೂರು ನಡೆಯಲಿದೆ. ಸಂಜೆ 8ಕ್ಕೆ ಧಾರ್ಮಿಕ ಪ್ರವಚನದ ಉದ್ಘಾಟನಾ ಸಮಾರಂಭವನ್ನು ಅಬ್ದುಲ್ ಖಾದರ್ ಮುಸ್ಲಿಯಾರ್ ಪೈಯಕ್ಕಿ ಅಧ್ಯಕ್ಷತೆಯಲ್ಲಿ ಸೈಯದ್ ಆಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಕೀಚೇರಿ ಅಬ್ದುಲ್ ಗಫೂರ್ ವೌಲವಿ ಪ್ರವಚನ ನೀಡುವರು.
ಫೆ.26ರಂದು ಬೆಳಗ್ಗೆ 10ಕ್ಕೆ ವೌಲೀದ್ ಪಾರಾಯಣ ನಡೆಯಲಿದೆ. ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವ ನೀಡುವರು. 11ಕ್ಕೆ ಸೌಹಾದರ್ ಸಂಗಮ ನಡೆಯಲಿದ್ದು ಸಚಿವ ಯು.ಟಿ ಖಾದರ್ ಸಮಾರಂಭ ಉದ್ಘಾಟಿಸುವರು. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ, ಶಾಸಕ ಪಿ.ಬಿ ಅಬ್ದುರ್ರಝಾಕ್‌ಎನ್.ಎ ನೆಲ್ಲಿಕುನ್ನು, ರಂಗತ್ತ್ ರೈ ಬಲ್ಲಾಳ್, ಯೆನೆಫೊಯ ಅಬ್ದುಲ್ಲಾ ಕುಂಞಿ, ಮೋನು ಹಾಜಿ ಕಣಚೂರು ಮತ್ತಿತರರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಮಜೀದ್ ದಾರಿಮಿ, ಕೆ.ಎಚ್.ಅಬ್ದುಲ್ ಖಾದರ್ ಹಾಜಿ, ಹನೀಫ್ ಹಾಜಿ ಪೈವಳಿಕೆ , ಅಝೀಝ್ ಮರಿಕೆ ಉಪಸ್ಥಿತರಿದ್ದರು.







