ದೇರಳಕಟ್ಟೆ ರೇಂಜ್ ಮುಅಲ್ಲಿಂ ಫೆಸ್ಟ್

ಉಳ್ಳಾಲ, ಫೆ.19: ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ರೇಂಜ್ ಮಟ್ಟದ ಮದ್ರಸ ಅಧ್ಯಾಪಕರ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮವು ಅಸೈ ಬದ್ರಿಯಾ ಮದ್ರಸದಲ್ಲಿ ನಡೆಯಿತು.
ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ದುಆ ನೆರವೇರಿಸಿದರು. ಸ್ಥಳೀಯ ಮದ್ರಸ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್ ಅಧ್ಯಕ್ಷತೆ ವಹಿಸಿದ್ದರು. ಅಸೈ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು. ಮುಸ್ತಾ ಮಾಸ್ಟರ್ ಮುಖ್ಯ ಭಾಷಣಗೈದರು. ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಮೊಯ್ದಿನ್ ಕುಂಞಿ ಮರಾಠಿಮೂಲೆ, ರೇಂಜ್ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ, ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ಪನೀರು, ಸ್ಥಳೀಯ ಮದ್ರಸ ಮುಖ್ಯ ಶಿಕ್ಷಕ ಅಬ್ದುರ್ರಹ್ಮಾನ್ ಫೈಝಿ ಗ್ರಾಮಚಾವಡಿ, ಶಂಸುಲ್ ಉಲಮಾ ದಾರುಸ್ಸಲಾಂ ಅರಬಿಕ್ ಕಾಲೇಜು ಉಪಾಧ್ಯಕ್ಷ ಇಸಾಕ್ ಹಾಜಿ ನಾಟೆಕಲ್ ಉಪಸ್ಥಿತರಿದ್ದರು.
ಸ್ಪರ್ಧೆಯ ವಿಜೇತರು: ಪರೇಕ್ಕಳ ಕುಂಡೂರು ಹಿಮಾಯತುಲ್ ಇಸ್ಲಾಮ್ ಮದ್ರಸ ಪ್ರಥಮ, ಕಿನ್ಯ ಕುತುಬಿಯ್ಯಾ ಮದ್ರಸ ದ್ವಿತೀಯ, ದೇರಳಕಟ್ಟೆ ಹಯಾತುಲ್ ಇಸ್ಲಾಮ್ ಮದ್ರಸ ತೃತೀಯ ಸ್ಥಾನ ಪಡೆದಿದೆ. ಯಾಸಿರ್ ಅರಾಫತ್ ಕೌಸರಿ ಹಾಗೂ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕರಾಯ ಕಲಾ ಪ್ರತಿಭೆ ಪ್ರಶಸ್ತಿ ಪಡೆದರು.
ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್ ಅಝ್ಹರಿ ಪಾತೂರು ಸ್ವಾಗತಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ವಂದಿಸಿದರು.







