ಬೊಳ್ಳೂರು: ಎಸ್ಕೆಎಸ್ಸೆಸೆಫ್ ಸ್ಥಾಪನಾ ದಿನಾಚರಣೆ
.jpg)
ಮುಲ್ಕಿ, ಫೆ.19: ಎಸ್ಕೆಎಸ್ಸೆಸೆಫ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಬೊಳ್ಳೂರು ಶಂಸುಲ್ ಉಲಮಾ ಮೆಮೋರಿಯಲ್ ಸೆಂಟರ್ ನ ಮುಂಭಾಗದಲ್ಲಿ ಹಳೆಯಂಗಡಿ ಎಸ್ಕೆಎಸ್ಸೆಸೆಫ್ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ರವಿವಾರ ನಡೆಯಿತು.
ಎಸ್ಕೆಎಸ್ಸೆಸೆಫ್ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ಉಸ್ತಾದ್ ದ್ವಜಾರೋಹಣ ಗೈದು ದುಆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಯೂನಿಟ್ ನ ಅಧ್ಯಕ್ಷ ಹನೀಫ್ ಐ.ಎ.ಕೆ, ಉಪಾಧ್ಯಕ್ಷ ಬಿ.ಎಂ.ಇಬ್ರಾಹಿಂ, ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್ ಇಂದಿರಾನಗರ, ಅಬ್ದುಲ್ ಲತೀಫ್ ಫೈಝಿ ಕಡಬ, ಶಂಸುಲ್ ಉಲಮಾ ಮೆಮೋರಿಯಲ್ ಸೆಂಟರ್ ಜೊತೆ ಕಾರ್ಯದರ್ಶಿ ಕೌಶಿಕ್ ಎಂ.ಸಿ.ಎಫ್, ಬೊಳ್ಳೂರು ಎಸ್ಕೆಎಸ್ಸೆಸೆಫ್ ನ ಅಧ್ಯಕ್ಷ ಫರ್ವೇಝ್ ಕೊಪ್ಪಲ ಮತ್ತಿತರರು ಉಪಸ್ಥಿತರಿದ್ದರು.
Next Story





