ಒಂದೂವರೆ ವರ್ಷದ ಮಗುವಿನ ತಲೆಯಲ್ಲಿ ಸಿಕ್ಕಿಹಾಕಿಕೊಂಡ ಸ್ಟೀಲ್ ಪಾತ್ರೆ

ವಾಣಿಮೇಲ್,ಫೆ. 19: ಆಹಾರ ತಯಾರಿಸಲು ಬಳಸುವ ಸ್ಟೀಲ್ ಪಾತ್ರೆಯೊಂದು ಒಂದೂವರೆವರ್ಷದ ಗಂಡು ಮಗುವಿನ ತಲೆಯಲ್ಲಿ ಎರಡುಗಂಟೆಗಳ ಕಾಲ ಸಿಲುಕಿಕೊಂಡು ಅತಂಕಕ್ಕೆ ಕಾರಣವಾಗಿತ್ತು. ಶನಿವಾರ ಮಧ್ಯಾಹ್ನ ಮುಹಮ್ಮದ್ ಉಮೈರ್ ಎನ್ನುವ ಮಗುವಿನ ತಲೆಯಲ್ಲಿ ಸ್ನಾನದ ವೇಳೆ ಪಾತ್ರೆ ಸಿಲುಕಿಬಿಟ್ಟಿತ್ತು.
ಮಗು ಬೊಬ್ಬೆ ಹೊಡೆಯ ತೊಡಗಿದಾಗ ಮಗುವನ್ನೆತ್ತಿಕೊಂಡು ಪೋಷಕರು ಚೆಕ್ಕಾಡ್ ಅಗ್ನಿಶಾಮಕದಳದ ಕಚೇರಿಗೆ ಕರೆತಂದಿದ್ದರು. ಅಗ್ನಿಶಾಮಕ ದಳ ಅಧಿಕಾರಿಗಳು ಪಾತ್ರೆಯನ್ನು ಕತ್ತರಿಸಿ ಮಗುವಿನ ತಲೆಯಿಂದ ಬೇರ್ಪಡಿಸಿದ್ದಾರೆ. ಶೈನೇಶ್ ಮೊಕೇರಿ, ಕೆ.ಪಿ. ಸುನೀಲ್ ಕುಮಾರ್, ರಾಮದಾಸನ್, ವಿ.ಎನ್. ಸುರೇಶ್ ಮಗುವಿನ ತಲೆಯಿಂದ ಪಾತ್ರೆಯನ್ನು ತೆಗೆಯುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆಂದು ವರದಿ ತಿಳಿಸಿದೆ.
Next Story