ಉಡುಪಿ: ಕಾತ್ಯಾಯಿನಿ ಶಿಶು ಮಂದಿರದ ಬೆಳ್ಳಿಹಬ್ಬ ಸಂಭ್ರಮ

ಉಡುಪಿ, ಫೆ.19: ಶಿಶುಮಂದಿರಗಳು ನೈತಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಂಸ್ಕಾರ ನೀಡುತ್ತದೆ. ಆದುದರಿಂದ ಮಕ್ಕಳಿಗೆ ನಮ್ಮ ತನ, ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಶಿಶುಮಂದಿರ ಸಮಾಜಕ್ಕೆ ಅವಶ್ಯಕ ಎಂದು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಕಡಿಯಾಳಿಯಲ್ಲಿ ಶನಿವಾರ ನಡೆದ ಕುಂಜಿಬೆಟ್ಟು ಶ್ರೀಕಾತ್ಯಾಯಿನಿ ಶಿಶು ಮಂದಿರದ ಬೆಳ್ಳಿ ಹಬ್ಬ ಸಂಭ್ರಮ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೋಹನ್ ಉಪಾಧ್ಯಾಯ ಮಾತನಾಡಿದರು. ಶಿಶುಮಂದಿರ ಹಳೆ ವಿದ್ಯಾರ್ಥಿ ಗಗನ್ ಜಿ. ಪ್ರಭು ಸ್ವಸ್ತಿ ವಾಚನ ಮಾಡಿದರು. ರಾಜ್ಯ ಸ್ಕೌಟ್ ಮತ್ತು ಗೈಡ್ಸ್ ಉಪಾಧ್ಯಕ್ಷೆ ಶಾಂತ ವಿ.ಆಚಾರ್ಯ, ನಗರಸಭೆ ಸದಸ್ಯ ಶಶಿರಾಜ್ ಕುಂದರ್, ಕುಂಜಿಬೆಟ್ಟು ಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಶಿಶುಮಂದಿರ ಅಧ್ಯಕ್ಷ ಕೆ.ಸಂತೋಷ್ ಕಿಣಿ ಉಪಸ್ಥಿತರಿದ್ದರು.
ಶಿಶುಮಂದಿರದ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ಕಾರ್ಯ ಕ್ರಮ ನಿರೂಪಿಸಿದರು. ನಂತರ ಶಿಶುಮಂದಿರ ಮಕ್ಕಳಿಂದ ವಿವಿಧ ಸಾಂಸ್ಕೃತ ಕಾರ್ಯಕ್ರಮ ನಡೆಯಿತು.





