ಉಡುಪಿ: ಭರತನಾಟ್ಯ ಉತ್ಸವ 'ನೃತ್ಯೋತ್ಸವ' ಉದ್ಘಾಟನೆ
ಉಡುಪಿ, ಫೆ.19: ಜಂಜಾಟದಿಂದ ಕೂಡಿರುವ ನಮ್ಮ ಜೀವನ ಯಾಂತ್ರೀ ಕೃತವಾಗಿದೆ. ಆದುದರಿಂದ ನಮ್ಮಲ್ಲಿ ಜೀವನೋತ್ಸಾಹ ತುಂಬಲು ನೃತ್ಯ ಕಲೆ ಅಗತ್ಯ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಕೃಷ್ಣಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಸೃಷ್ಟಿ ನೃತ್ಯ ಕಲಾಕುಟೀರ ವತಿಯಿಂದ ರಾಜಾಂಗಣದಲ್ಲಿ ರವಿವಾರ ಆಯೋಜಿಸ ಲಾದ ಭರತನಾಟ್ಯ ಉತ್ಸವ 'ನೃತ್ಯೋತ್ಸವ'ವನ್ನು ಉದ್ಘಾಟಿಸಿ ಅವರು ಆರ್ಶೀ ವಚನ ನೀಡಿದರು.
ವಿದ್ಯೆಗೆ ಕೊನೆ ಎಂಬುದು ಇಲ್ಲ. ಹೆಚ್ಚು ಹೆಚ್ಚು ತಿಳಿದುಕೊಂಡಂತೆ ನಾವು ಇನ್ನಷ್ಟು ಬೆಳೆಯಲು ಸಾಧ್ಯ. ಭರತನಾಟ್ಯ ಕಲೆಯೂ ಅದಕ್ಕೆ ಹೊರತಾಗಿಲ್ಲ. ನೃತ್ಯ ಎಂದರೆ ಕೇವಲ ಕುಣಿತ ಮಾತ್ರವಾಗಿರದೆ ಅದರ ಚಿಂತನೆಯೂ ನಡೆ ಯುತ್ತದೆ. ಇದರಿಂದ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ರಂಗಕರ್ಮಿ ಉದ್ಯಾವರ ಮಾದವ ಆಚಾರ್ಯ ಮಾತನಾಡಿ, ನಮ್ಮ ಪರಂಪಂರೆಯಿಂದ ಬಂದ ಶಾಸ್ತ್ರಿಯತೆಯನ್ನು ಕಳೆದುಕೊಳ್ಳಬಾರದು. ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು. ಕಲೆಯ ಬಗ್ಗೆ ಸೌಹಾರ್ದತೆ ಬರಬೇಕು. ಆಧುನೀಕರಣದ ಭರಾಟೆಯಲ್ಲಿ ನಮ್ಮ ಸಂಪ್ರದಾಯವನ್ನು ಕಳೆದುಕೊಂಡರೆ ಅದಕ್ಕಿಂತ ದೊಡ್ಡ ಅಪಚಾರ ಬೇರೊಂದಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಟಪಾಡಿ ರೋಟರಿ ಅಧ್ಯಕ್ಷ ಶ್ರೀಧರ್ ದೇವಾಡಿಗ, ಮಾಜಿ ಅಧ್ಯಕ್ಷೆ ತುಳಸಿ ದೇವಾಡಿಗ ಉಪಸ್ಥಿತರಿದ್ದರು. ಚಂದ್ರಶೇಖರ್ ಸ್ವಾಗತಿಸಿದರು. ಆಕಾಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.







