ಉಡುಪಿ: ಪ್ರತಿಭಾ ಸಿಂಚನದಲ್ಲಿ ಬಹುಮಾನ

ಉಡುಪಿ, ಫೆ.19: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಡುಪಿ ಇದರ ವತಿಯಿಂದ ಉಡುಪಿಯಲ್ಲಿ ಇತ್ತೀಚೆಗೆ ನಡೆದ ಮದ್ರಸ ಮಕ್ಕಳ ಪ್ರತಿಭಾ ಸಿಂಚನದಲ್ಲಿ ರಂಗನಕೆರೆ ನೂರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಗಳು ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ನಿಝಾಮುದ್ದೀನ್‌ಜೂನಿಯರ್ ವಿಭಾಗದ ಅರಬಿ ಹಾಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಶಾಹುಲ್ ಮತ್ತು ಅಬ್ದುಲ್ಲಾ ಜನರಲ್ ವಿಭಾಗದ ನಫೀಸತ್ ಮಾಲೆ ಆಲಾಪನೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





