ಸಿನೆಮಾ ನಟಿಗೆ ಕಿರುಕುಳ: ಒಟ್ಟು ಮೂವರ ಬಂಧನ

ಕೊಚ್ಚಿ,ಫೆ. 19: ಸಿನೆಮಾನಟಿ ಅಪಹರಣ ಮತ್ತು ದೈಹಿಕ ಕಿರುಕುಳ ನೀಡಿದ ಘಟನೆಯಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಕ್ವಾಟೇಶನ್ ತಂಡದ ಸದಸ್ಯರಾದ ವಡಿವಾಲ್ ಸಲೀಂ ಮತ್ತು ಮನು ಎಂಬವರು ಕೂಡಾ ಸಿನೆಮಾ ನಟಿ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತನಿಖೆಯಿಂದ ತಿಳಿದುಕೊಂಡಿದ್ದಾರೆ. ಇವರು ಪ್ರಯಾಣಿಸಿದ್ದ ಟೆಂಪೊ ಟ್ರಾವಲರ್ ಪುಲ್ಲೆ ಪಡಿ ರಸ್ತೆಯಲ್ಲಿ ತೊರೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾಹನದ ಹೆಚ್ಚಿನ ತಪಾಸಣೆ ಕಾರ್ಯ ನಡೆಯುತ್ತಿದೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಮೂವರನ್ನು ಮಾತ್ರ ಬಂಧಿಸಲಾಗಿದೆ.
ಈ ಮೊದಲು ಇಬ್ಬರು ಆರೋಪಿಗಳನ್ನು ಪೊಲೀಸರು ಕೋಯಮತ್ತೂರಿನಿಂದ ಬಂಧಿಸಿ ಕರೆತಂದಿದ್ದರು. ಆಲುವ ಎಸ್ಪಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಲಾಗಿದೆ. ಇವರು ಆಲಪ್ಪುಝದ ಅಂಬಲಪ್ಪುಯದ ನಿವಾಸಿಗಳಾಗಿದ್ದಾರೆ. ಇನ್ನೂ ಒಬ್ಬ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ. ಪ್ರಕರಣದಲ್ಲಿ ಚಾಲಕ ಮಾರ್ಟಿನ್ ಆಂಟನಿಯನ್ನು ಪೊಲೀಸರು ನಿನ್ನೆಯೇ ಬಂಧಿಸುವಲ್ಲಿ. ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದು, ಈಗ ಮೂವರನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆಂದು ವರದಿ ತಿಳಿಸಿದೆ.







