ಸುಳ್ಯ: ಹೋಟೇಲ್‌ಗೆ ನುಗ್ಗಿದ ಕಾರು

ಸುಳ್ಯ, ಫೆ.19: ಗೂನಡ್ಕ ಬಳಿ ಹೋಟೆಲೊಂದಕ್ಕೆ ಕಾರೊಂದು ನುಗ್ಗಿ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
ಮಡಿಕೇರಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಗೂನಡ್ಕ ಬಳಿ ತಲುಪುತ್ತಿದಂತೆ ಚಾಲಕನ ನಿಯಂತ್ರಣ ತಪ್ಪಿ ಚೆಮ್ನಾಡ್ ತ್ರೀ ಸ್ಟಾರ್ ಹೋಟೆಲ್‌ಗೆ ನುಗ್ಗಿತು. ಪರಿಣಾಮವಾಗಿ ಹೋಟೆಲ್‌ನ ಸಾಮಾಗ್ರಿಗಳು ಹಾನಿಗೊಂಡಿದೆ.
ಹೋಟೆಲ್ ಮಾಲಕರಿಗೆ ಸುಮಾರು 1 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story





