ಸುಳ್ಯ: ಪಂಜದಲ್ಲಿ ಪಿಕಪ್ ವಾಹನ ಕಳವು
ಸುಳ್ಯ, ಫೆ.19: ಪಂಜದ ಪೊಳೆಂಜ ಎಂಬಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲೇ ಸಮೀಪದಲ್ಲಿದ್ದ ಪಿಕಪ್ ವಾಹನ ಕೂಡ ಕಳ್ಳತನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಪೊಳೆಂಜದ ಅಬ್ದುಲ್ ರಹಿಮಾನ್ ಎಂಬವರ ಬದ್ರಿಯ ಸ್ಟೋರ್‌ಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ನಗದು ಮತ್ತು ಇತರ ವಸ್ತುಗಳನ್ನು ದೋಚಿದ್ದಾರೆ.ಅಂಗಡಿ ಸಮೀಪದಲ್ಲಿ ನಿಲ್ಲಿಸಿದ್ದ ಅಬ್ದುಲ್ ರಹಿಮಾನ್ ಅವರ ಸಂಬಂಧಿಯಾದ ಪುತ್ತೂರು ತಾಲೂಕಿನ ಬುಳೇರಿಕಟ್ಟೆ ಎಂ ಮಹಮ್ಮದ್ ಎಂಬವರ ಪಿಕಪ್ ವಾಹನ ಕೂಡ ಕಳ್ಳತನ ನಡೆಸಿದ್ದಾರೆ.
ಮಹಮ್ಮದ್ ಗುತ್ತಿಗೆದಾರರಾಗಿದ್ದು ಬೀದಿಗುಡ್ಡೆಯಲ್ಲಿ ಬಿ.ಎಸ್ಎನ್.ಎಲ್ ಸಂಸ್ಥೆಯ ಕೆಲಸವಿದ್ದರಿಂದ ಪೊಳೆಂಜದ ಅವರ ಸಂಬಂದಿಗಳ ಮನೆಯ ಅಂಗಳ ಸಮೀಪ ಪಿಕಪ್ ಇರಿಸಿದ್ದರು. ಅಂಗಡಿ ಹಿಂಬದಿ ಅಬ್ದುಲ್ ರಹಿಮಾನ್ ಮನೆ ಇದೆ. ಮುಂಜಾನೆ ವಿಷಯ ತಿಳಿದ ಅವರು . ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





