ಇರೊಂ ಶರ್ಮಿಳಾರ ಪಕ್ಷಕ್ಕೆ ಕೇಜ್ರಿವಾಲ್‌ರಿಂದ ದೇಣಿಗೆ

ಹೊಸದಿಲ್ಲಿ,ಫೆ. 19: ಮಣಿಪ್ಪುರದ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಇರೊಂ ಶರ್ಮಿಳಾರ ಪ್ರಜಾ ಪಾರ್ಟಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 50,000ರೂಪಾಯಿ ದೇಣಿಗೆ ನೀಡಿದ್ದಾರೆ. ಶರ್ಮಿಳಾರ ಪಕ್ಷದ ಚಟುವಟಿಕೆಗಳಿಗಾಗಿ 50,000 ರೂಪಾಯಿ ದೇಣಿಗೆ ನೀಡುವುದಾಗಿ ಕೇಜ್ರಿವಾಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಒಳ್ಳೆಯ ಮನಸ್ಸಿನ ಜನರು ಶರ್ಮಿಳಾರಿಗೂ ಅವರ ಪಕ್ಷಕ್ಕೂ ನೆರವು ನೀಡುವರೆಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೇಣಿಗೆ ಸ್ವೀಕರಿಸಿದ ಬಳಿಕ ಕೇಜ್ರಿವಾಲ್‌ರಿಗೆ ಕೃತಜ್ಞತೆ ಸಲ್ಲಿಸಿ ಪ್ರಜಾ ಪಾರ್ಟಿ ಟ್ವೀಟ್ ಮಾಡಿದೆ. ಚುನಾವಣೆ ಸ್ಪರ್ಧಿಸುತ್ತಿರುವ ಪ್ರಜಾ ಪಾರ್ಟಿ ಆನ್‌ಲೈನ್ ಇತ್ಯಾದಿಗಳ ಮೂಲಕ ದೇಣಿಗೆಗೆ ಆಹ್ವಾನ ನೀಡಿದೆ. ಇನ್ನೋರ್ವ ಎಎಪಿ ನಾಯಕ ಹಾಗೂ ಸಂಗ್ರೂರ್ ಸಂಸದ ಭಗ್ವಂತ್ ಸಿಂಗ್ ಮಾನ್ ಅವರ ಒಂದು ತಿಂಗಳ ಸಂಬಳವನ್ನು ಇರೊಂ ಶರ್ಮಿಳಾರ ಪಕ್ಷಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆಂದು ವರದಿಯಾಗಿದೆ.
Next Story





