ಫರಂಗಿಪೇಟೆ: ಅಮ್ಮೆಮಾರ್ ಎಸ್ಕೆಎಸ್ಸೆಸೆಫ್ ನೂತನ ಕಚೇರಿ ಉದ್ಘಾಟನೆ

ಫರಂಗಿಪೇಟೆ ಪೆ 19: ಎಸ್ಕೆಎಸ್ಸೆಸೆಫ್ ಅಮ್ಮೆಮಾರ್ ಘಟಕ ಇದರ ನೂತನ ಕಚೇರಿಯನ್ನು ಸಯ್ಯದ್ ಶಫೀಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರು ಉದ್ಘಾಟನೆ ಮಾಡಿದರು
ಮುಖ್ಯ ಅತಿಥಿಗಳಾಗಿ ಅಬ್ದುಲ್ ಅಝೀಝ್ ಅಶ್ರಫಿ ಪಾನತ್ತೂರು ಈ ಸಂದರ್ಭದಲ್ಲಿ ಸಂದೇಶ ಮಾತುಗಳನ್ನಾಡಿದರು
ಬೆ.ಜೆ ಎಮ್.ಎ ಇದರ ಮುದರ್ರಿಸ್ ಎ.ಎಮ್ ಅಬೂಸ್ವಾಲಿಹ್ ಫೈಝಿ, ಉಮರಬ್ಬ ಎ.ಎಸ್.ಬಿ ಅಧ್ಯಕ್ಷರು ಬದ್ರಿಯಾ ಜುಮಾ ಮಸ್ಜಿದ್ ಅಮ್ಮೆಮ್ಮಾರ್, ಜಮಾಲುದ್ದೀನ್ ಫೈಝಿ, ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಫರಂಗಿಪೇಟೆ ಜುಮಾ ಮಸ್ಜಿದ್ ಮುದರ್ರಿಸ್ ಅಬೂಝಾಹಿರ್ ಉಸ್ಮಾನ್ ದಾರಿಮಿ, ಅಖ್ತರ್ ಹುಸೈನ್, ಮುಸ್ತಫಾ ಅಮ್ಮೆಮಾರ್, ಹಮೀದ್, ಅಬ್ದುಲ್ ಖಾದರ್ ಲೀಡರ್, ಜಮಾಲ್, ಮುಖ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ನಿಯಾಝ್ ಸ್ವಾಗತಿಸಿ ಇಸ್ಮಾಯಿಲ್ ಉಸ್ತಾದ್ ವಂದಿಸಿದರು.
Next Story





