ಮಂಗಳೂರು: ಫೆ.20ರಂದು 'ರಂಗಪಯಣ-2017' ಉದ್ಘಾಟನೆ
.jpg)
ಮಂಗಳೂರು, ಫೆ. 19: ಸಂತ ಅಲೋಶಿಯಸ್ ಕಾಲೇಜು ನಾಟಕ ಸಂಘ ಹಾಗೂ ಜರ್ನಿ ಥೇಟರ್ ಗ್ರೂಪ್ ಇವರ ಸಹಯೋಗದೊಂದಿಗೆ ರಂಗಪಯಣ 2017 ಉದ್ಘಾಟನಾ ಕಾರ್ಯಕ್ರಮವು ಫೆ.20ರಂದು ಸಂಜೆ 6:30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ರೆ.ಫಾ.ಸ್ವೀಬರ್ಟ್ ಡಿಸಿಲ್ವ ಎಸ್.ಜೆ. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಂದು ರಂಗಪಯಣ 2017ರ ಪ್ರಯುಕ್ತ ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿದ ಹಾಗೂ ಭವ್ಯ ಶೆಟ್ಟಿ ಅವರು ನಿರ್ದೇಶಿಸಿರುವ ಅಗ್ನಿವರ್ಣ ನಾಟಕವನ್ನು ಕಾಲೇಜಿನ ನಾಟಕ ಸಂಘದ ವಿದ್ಯಾರ್ಥಿಗಳು ಸಂಜೆ4 ಗಂಟೆಗೆ (ವಿದ್ಯಾರ್ಥಿಗಳಿಗಾಗಿ)ಮತ್ತು 7 ಗಂಟೆಗೆ ಪ್ರದರ್ಶಿಸಲಿದ್ದಾರೆ.
ನಾಟಕ ಸಂಘದ ಸಂಯೋಜಕ ಪ್ರೊ.ಲಾರೆನ್ಸ್ ಪಿಂಟೊ, ಜರ್ನಿ ಥೇಟರ್ ಗ್ರೂಪ್‌ನ ಅಧ್ಯಕ್ಷ ದೀಪಕ್ ಹಾಗೂ ನಾಟಕ ಸಂಘದ ಅಧ್ಯಕ್ಷೆ ಸ್ಮಿತಾ.ಡಿ.ಕೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ರಂಗಾಯಣ ನಡೆಸುತ್ತಿರುವ ಕಾಲೇಜು ನಾಟಕ ಸ್ಪರ್ಧೆಯಲ್ಲಿ ನಾಟಕ ಅಗ್ನಿವರ್ಣ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ವಲಯಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.







