ಉಡುಪಿ: 'ಸಮರ್ಪಣ' ಸಂಸ್ಥೆ ಉದ್ಘಾಟನೆ

ಉಡುಪಿ, ಫೆ.19: ಹಾದಿಬೀದಿಯಲ್ಲಿ ಸುತ್ತಾಡುವ ಬಡ ನಿರ್ಗತಿಕರ ರಕ್ಷಣೆ ಮತ್ತು ಹಾರೈಕೆಗಾಗಿ ಸ್ಥಾಪಿಸಲಾಗಿರುವ 'ಸಮರ್ಪಣ' ಸಂಸ್ಥೆಯ ಉದ್ಘಾಟನೆ ರವಿವಾರ ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು.
ಹಿಂದಿ ಝೀ ವಾಹಿನಿಯ ಸರಿಗಮಪ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ವಿಜೇತ ಗಾಯಕ ಉಡುಪಿ ಪುತ್ತೂರಿನ ಗಗನ್ ಜಿ.ಗಾಂವ್ಕರ್ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಸಮರ್ಪಣಾ ಸಂಸ್ಥೆಯ ಸಂಸ್ಥಾಪಕ ಪರೀಕ್ಷಿತ್ ಶೇಟ್, ಪ್ರವರಿಕ, ಆಶಾ ನಿಲಯ ಶಾಲೆಯ ಮುಖ್ಯೋಪಾಧ್ಯಾ ಯಿನಿ ಆಗ್ನೇಸ್ ಹೇಮಾವತಿ, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Next Story





