ಬೆದರಿಕೆಗೆ ಮಣಿಯೆ; ಗೌರವಿಸಿದರೆ ಸ್ಪಂದಿಸುವೆ ಅಮೆರಿಕಕ್ಕೆ ಇರಾನ್ ಸ್ಪಷ್ಟ ನುಡಿ

ಮ್ಯೂನಿಕ್(ಜರ್ಮನಿ), ಫೆ.19: ಅಮೆರಿಕವು ಟೆಹರಾನ್ ಮೇಲೆ ಹೊಸ ರೀತಿಯ ಒತ್ತಡಗಳನ್ನು ಹೇರುತ್ತಿರುವುದನ್ನು ಇರಾನ್‌ನ ವಿದೇಶಾಂಗ ಸಚಿವ ಖಂಡಿಸಿದ್ದಾರೆ. ತನ್ನ ದೇಶವು ಇಂತಹ ಬೆದರಿಕೆಗಳಿಂದ ವಿಚಲಿತವಾಗದು. ಆದರೆ ತನ್ನೊಂದಿಗೆ ಗೌರವದಿಂದ ವರ್ತಿಸಿದಲ್ಲಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಲಿದೆಯೆಂದು ತಿಳಿಸಿದ್ದಾರೆ.
ಜರ್ಮನಿಯ ಮ್ಯೂನಿಕ್‌ನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಇರಾನಿನ ವಿದೇಶಾಂಗ ಸಚಿವ ಮುಹಮ್ಮದ್ ಜಾವೇದ್ ಮಾತನಾಡುತ್ತಾ, ‘‘ ನಾವು ಬೆದರಿಕೆಗಳಿಗಾಗಲಿ ಅಥವಾ ನಿರ್ಬಂಧಗಳಿಗಾಗಲಿ ಸ್ಪಂದಿಸುವುದಿಲ್ಲ. ಆದರೆ ಪರಸ್ಪರ ಗೌರವದಿಂದ ನಡೆದುಕೊಂಡಲ್ಲಿ ಉತ್ತಮವಾಗಿ ಸ್ಪಂದಿಸುತ್ತೇವೆ ಹಾಗೂ ಇರಾನ್ ಯಾವುದೇ ರೀತಿಯ ಬೆದರಿಕೆಗಳಿಗೆ ಮಣಿಯಲಾರದು ಎಂದವರು ಹೇಳಿದ್ದರು. ಅಣ್ವಸ್ತ್ರಗಳ ಉತ್ಪಾದನೆಯಲ್ಲಿ ಇರಾನ್‌ಗೆ ಯಾವುದೇ ಆಸಕ್ತಿಯಿಲ್ಲವೆಂದವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇರಾನ್ ಜೊತೆ ಅಮೆರಿಕ ಹಾಗೂ ಇತರ ಐದು ಜಾಗತಿಕ ಶಕ್ತಿಗಳು 2015ರಲ್ಲಿ ಏರ್ಪಡಿಸಿದ್ದ ಒಪ್ಪಂದವನ್ನು ಡೊನಾಲ್ಡ್ ಟ್ರಂಪ್ ಸತತವಾಗಿ ಟೀಕಿಸುತ್ತಾ ಬಂದಿದ್ದಾರೆ. ಈ ಒಪ್ಪಂದದಡಿ ಇರಾನ್, ತನ್ನ ಯುರೇನಿಯಂ ಸಂವರ್ಧನೆ ಕಾರ್ಯಕ್ರಮವನ್ನು ಕೈಬಿಡಬೇಕಾಯಿತು. ಇದಕ್ಕೆ ಪ್ರತಿಯಾಗಿ ಆ ದೇಶದ ಮೇಲೆ ವಿಧಿಸಲಾಗಿದ್ದ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.
ಆದರೆ ಇತ್ತೀಚೆಗೆ ಇರಾನ್ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಪರೀಕ್ಷಿಸಿದ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ನಿಗಾವಿರಿಸಿರುವುದಾಗಿ ಟ್ರಂಪ್ ಹೇಳಿದ್ದರು ಹಾಗೂ ಅವರು ಇತ್ತೀಚೆಗೆ ಹೊರಡಿಸಿದ ಆದೇಶವೊಂದರಲ್ಲಿ ಎರಡು ಡಜನ್‌ಗಠಿೂ ಅಧಿಕ ಇರಾನಿಯನ್ ಕಂಪೆನಿಗಳು ನಿರ್ಬಂಧಿಸಿದ್ದರು ಮತ್ತು ಇರಾನಿ ಪ್ರಜೆಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿದ್ದರು.







