ಕಿನ್ಯ: ಎಸ್ಸೆಸ್ಸೆಫ್, ಎಸ್‌ವೈಎಸ್ ಪ್ರತಿನಿಧಿ ಸಮಾವೇಶ

ಉಳ್ಳಾಲ, ಫೆ. 19: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಆಶ್ರಯದಲ್ಲಿ ಱಸಂಘ ಬದುಕಿನ ಆಧ್ಯಾತ್ಮಿಕತೆೞಎಂಬ ವಿಚಾರದಲ್ಲಿ ರವಿವಾರ ಕಿನ್ಯ ಬುಖಾರಿ ಜುಮಾ ಮಸೀದಿಯಲ್ಲಿ ಪ್ರತಿನಿಧಿ ಸಮಾವೇಶ ನಡೆಯಿತು.
ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಲ್ಲದೆ, ಶಿಕ್ಷಣದ ಅಗತ್ಯವನ್ನು ಮನಗೊಂಡು ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ಮೂಸ ಸಖಾಫಿ ಕಳತ್ತೂರು ಹೇಳಿದರು.
ಕಾರ್ಯಕ್ರಮವನ್ನು ಕೆ.ಸಿ.ನಗರ ಮಸೀದಿ ಖತೀಬ್ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಆಲ ತಂಙಳ್ ಕಿನ್ಯ ದುವಾ ನೆರವೇರಿಸಿದರು.
ಎಚ್. ಎಚ್. ಕುಂಞಿ ಹಾಜಿ, ಏಷಿಯನ್ ಬಾವಾ ಹಾಜಿ ದೇರಳಕಟ್ಟೆ, ದ.ಕ. ಜಿಲ್ಲಾ ಎಸ್‌ವೈಎಸ್ ಕೋಶಾಧಿಕಾರಿ ಕತ್ತರ್ ಬಾವಾ ಹಾಜಿ ಸಯ್ಯದ್ ಜಲಾಲ್ ತಂಙಳ್ ಉಳ್ಳಾಲ, ಮುಹಮ್ಮದ್ ಹಾಜಿ ಕಂಡಿಕ, ಎನ್‌ಎಸ್ ಉಮರ್ ಮಾಸ್ಟ್ರ್ ಕೆ.ಸಿ.ರೋಡ್, ಫಾರೂಕ್ ತಲಪಾಡಿ, ಬುಖಾರಿ ಮಸೀದಿ ಕಾರ್ಯದರ್ಶಿ ಅಬ್ಬಾಸ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.
ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯ ಸ್ವಾಗತಿಸಿದರು.





