ಅಮಿತ್ ಶಾರಿಂದ ಉವೈಸಿಗೆ 400 ಕೋ.ರೂ. ಲಂಚ: ದಿಗ್ವಿಜಯ್ ಆರೋಪ

ನಿಝಾಮಾಬಾದ್, ಫೆ.20: ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಮ್ ಮತಗಳನ್ನು ವಿಭಜಿಸುವ ಸಲುವಾಗಿ ಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಉವೈಸಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಂದ ಲಂಚ ಪಡೆದಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಉವೈಸಿಯವರು ಬಿಹಾರ ಚುನಾವಣೆಯ ಸಂದರ್ಭ ರಹಸ್ಯ ಸಭೆಯೊಂದರಲ್ಲಿ ರೂ.400 ಕೋಟಿ ಲಂಚ ಪಡೆದ ಹಾಗೆ ಈಗ ಉತ್ತರ ಪ್ರದೇಶ ಚುನಾವಣೆ ಸಂದರ್ಭವೂ ನಡೆಯುತ್ತಿದೆ ಎಂಬ ಬಗ್ಗೆ ತಮಗೆ ಮಾಹಿತಿ ದೊರೆತಿದೆ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
‘‘ಪ್ರತಿ ಚುನಾವಣೆಯ ಸಂದರ್ಭವೂ ಬಿಜೆಪಿಗೆ ಸಹಕಾರಿಯಾಗಲೆಂದೇ ಮುಸ್ಲಿಮ್ ಮತಗಳನ್ನು ವಿಭಜಿಸಲು ಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ’’ ಎಂದು ಸಿಂಗ್ ಆರೋಪಿಸಿದ್ದಾರೆ.
ಉವೈಸಿಯನ್ನು ನಂಬಬೇಡಿ ಎಂದು ಮುಸ್ಲಿಮರಿಗೆ ಮನವಿ ಮಾಡಿದ ಸಿಂಗ್, ಕಾಂಗ್ರೆಸ್ ಪಕ್ಷ ಯಾವತ್ತೂ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ.
Next Story





