ಹೆಚ್ಚು ನಿರಾಶ್ರಿತರನ್ನು ಸ್ವೀಕರಿಸಬೇಕೆಂದು ಸ್ಪೈನ್‌ನಲ್ಲಿ ಬೃಹತ್ ರ‍್ಯಾಲಿ

ಬಾರ್ಸಲೊನ,ಫೆ. 20: ಹೆಚ್ಚು ನಿರಾಶ್ರಿತರನ್ನು ಸ್ವೀಕರಿಸಬೇಕೆಂದು ಆಗ್ರಹಿಸಿ ಸ್ಪೈನ್‌ನ ಬಾರ್ಸಲೊನದಲ್ಲಿ ಬೃಹತ್ ರ‍್ಯಾಲಿ ನಡೆದಿದೆ. ಸರಕಾರ ಈ ಹಿಂದೆ ಭರವಸೆ ನೀಡಿದಂತೆ ನಿರಾಶ್ರಿತರನ್ನು ಸ್ವೀಕರಿಸಬೇಕೆಂದು ಹತ್ತುಸಾವಿರಕ್ಕೂ ಹೆಚ್ಚು ಮಂದಿ ರ‍್ಯಾಲಿ ನಡೆಸಿ ಆಗ್ರಹಿಸಿದ್ದಾರೆ.
ರ‍್ಯಾಲಿನಡೆಸುವಂತೆ ಜನರಿಗೆ ಬಾರ್ಸಲೊನ ಮೇಯರ್ ಕರೆ ನೀಡಿದ್ದರು. ಅವರ ಕರೆಗೆ ಓಗೊಟ್ಟು ಜನರು ಬೀದಿಗಿಳಿದರು. 2015ರಲ್ಲಿ ಯುರೋಪಿಯನ್ ಯೂನಿಯನ್ ದೇಶಗಳು ಅಂಗೀಕಾರ ನೀಡಿದ ಒಪ್ಪಂದ ಪ್ರಕಾರ ಇನ್ನೂ 16,000 ನಿರಾಶ್ರಿತರನ್ನು ಸ್ಪೈನ್ ಸ್ವೀಕರಿಸಬೇಕಾಗಿದೆ. ಆದರೆ ಈವರೆಗೆ ಕೇವಲ 1,100 ನಿರಾಶ್ರಿತರನ್ನು ಮಾತ್ರ ಅದು ಸ್ವೀಕರಿಸಿದೆ.
ಒಪ್ಪಂದದಲ್ಲಿರುವಷ್ಟು ನಿರಾಶ್ರಿತರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಷ್ಟು ಜನರನ್ನು ಸ್ವೀಕರಿಸಲು ದೇಶ ಸಿದ್ಧವಿದೆ. ಆದರೆ ಸರಕಾರ ತಡಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರೆಂದು ವರದಿ ತಿಳಿಸಿದೆ.
Next Story





