2050ರಲ್ಲಿ ಭಾರತ ವಿಶ್ವದ ಎರಡನೆ ಆರ್ಥಿಕ ಶಕ್ತಿ: ಅಧ್ಯಯನ ವರದಿ

ನ್ಯೂಯಾರ್ಕ್,ಫೆ. 20: ಭಾರತ 2050ಕ್ಕಾಗುವಾಗ ವಿಶ್ವದಲ್ಲೇ ಎರಡನೆ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ ಎಂದು ಜಾಗತಿಕ ಅಧ್ಯಯನ ವರದಿಯೊಂದು ತಿಳಿಸಿದೆ. ಚೈನ ವಿಶ್ವದಲ್ಲೆ ಒಂದನೆ ಆರ್ಥಿಕ ಶಕ್ತಿಯಾಗಿ ವಿಜೃಂಭಿಸಲಿದೆ ಎಂದು ಅಧ್ಯಯನ ಹೇಳುತ್ತಿದೆ. ಆರ್ಥಿಕತೆಯಲ್ಲಿ ಈಗ ಮೊದಲ ಸಾಲಿನಲ್ಲಿರುವ ಜಪಾನ್ , ಜರ್ಮನಿ ಮುಂತಾದ ರಾಷ್ಟ್ರಗಳು 2050ಕ್ಕಾಗುವಾಗ ಹಿನ್ನಡೆ ಅನುಭವಿಸಲಿವೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
2050ರಲ್ಲಿ ಜಾಗತಿಕ ಆರ್ಥಿಕ ಸ್ಥಿತಿಹೇಗಿರಲಿದೆ ಎನ್ನುವ ಬಗ್ಗೆ ನಡೆಸಿದ್ದ ಅಧ್ಯಯನದಲ್ಲಿ ಭಾರತಕ್ಕೆ ಆಶಾದಾಯಕ ವರದಿಯಿದೆ. 32 ದೇಶಗಳ ಆರ್ಥಿಕ ಸ್ಥಿತಿ ಪರಿಗಣಿಸಿದ ವಿವಿಧ ಶ್ರೇಣಿಗಳಾಗಿ ವಿಂಗಡಿಸಲಾಗಿದೆ.ಸೂಕ್ಷ್ಮ ಆರ್ಥಿಕ ಅಧ್ಯನ ರೀತಿಯ ನ್ನು ಅನುಸರಿಸಿ ಅಧ್ಯಯನ ನಡೆಸಲಾಗಿದೆ. 2017ರಿಂದ 2050ರವರೆಗಿನ 33ವರ್ಷಗಳ ನಡುವೆ ಪ್ರತಿಯೊಂದು ರಾಜ್ಯ ದಾಟಲಿರುವ ಆರ್ಥಿಕ ಬೆಳವಣಿಗೆಯತ್ತ ಅಧ್ಯಯನ ಬೆರಳು ತೋರಿಸಿದೆ. ಈ ಅವಧಿಯಲ್ಲಿ ಜಗತ್ತಿನಲ್ಲಿ ಯಾವ ಬದಲಾವಣೆ ಸಂಭವಿಸಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅಮೆರಿಕ ಹೊರತಾದ ಈಗ ಬೃಹತ್ ಆರ್ಥಿಕ ಶಕ್ತಿಯಾಗಿ ಇರುವ ಎಲ್ಲ ದೇಶಗಳು ಪಟ್ಟಿಯಲ್ಲಿ ಅತ್ಯಂತ ಹಿಂದಿನ ಸಾಲಲ್ಲಿದೆ. ಅಮೆರಿಕಕ್ಕೆ ಅಧ್ಯಯನ ವರದಿ ಜಗತ್ತಿನ ಮೂರನೆ ಆರ್ಥಿಕ ಶಕ್ತಿಯ ಸ್ಥಾನವನ್ನು ನೀಡಿದೆ.
ಆದರೆ ಈದೇಶಗಳು ಆರ್ಥಿಕವಾಗಿ ಹಿಂದುಳಿಯಲಿರುವ ಕಾರಣಗಳನ್ನು ಅಧ್ಯಯನವುವಿವರಿಸಿಲ್ಲ. 2050ಕ್ಕಾಗುವಾಗ ಇಂಡೊನೇಶಿಯ ಜಾಗತಿಕ ಆರ್ಥಿಕ ಶಕ್ತಿಗಳಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೇರಲಿದೆ. ಬಾಂಗ್ಲಾದೇಶ, ಪಾಕಿಸ್ತಾನಗಳಿಗೂ ಪಟ್ಟಿಯಲ್ಲಿ ಸ್ಥಾನವಿದೆ. ಪಾಕಿಸ್ತಾನ 16ನೆ ಸ್ಥಾನದಲ್ಲಿ ಮತ್ತು ಬಾಂಗ್ಲಾದೇಶ 23ನೇ ಸ್ಥಾನದಲ್ಲಿವೆ. ನೆದರ್ಲೆಂಡ್‌ಗೆ ಪಟ್ಟಿಯಲ್ಲಿ 32 ಸ್ಥಾನ ನೀಡಲಾಗಿದೆ ಎಂದು ವರದಿಯಾಗಿದೆ.





