ಕಾರನ್ನು ರೈಲು ಪ್ಲಾಟ್ ಫಾರ್ಮ್ ನುಗ್ಗಿಸಿದ ಯುವ ಕ್ರಿಕೆಟಿಗ

ಮುಂಬೈ, ಫೆ.20: ಭಾರತದ ಅಂಡರ್ -19 ಕ್ರಿಕೆಟ್ ತಂಡದ ಆಟಗಾರ ಹರ್‌ಪ್ರೀತ್ ಸಿಂಗ್ ಅಂಧೇರಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಕಾರು ನುಗ್ಗಿಸಿದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಆದರೆ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಕ್ರಿಕೆಟರ್ ಹರ್‌ಪ್ರೀತ್ ಸಿಂಗ್ ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಗೆ ಕಾರು ನುಗ್ಗಿಸಿರುವುದಾಗಿ ಆರೋಪಿಸಲಾಗಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಂದ್ರಾದಿಂದ ಬರುತ್ತಿದ್ದ ಹರ್ ಪ್ರೀತ್ ಸಿಂಗ್ ತನ್ನ ಕಾರನ್ನು ಜನ ದಟ್ಟಣೆಯಿಂದ ಕೂಡಿರುವ ಅಂಧೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್‌ನತ್ತ ನುಗ್ಗಿಸಿದ್ದಾರೆ, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಅಂಗವಿಕಲರಿಗೆ ಗಾಲಿ ಕುರ್ಚಿ ಮೂಲಕ ಪ್ಲಾಟ್‌ಫಾರ್ಮ್‌ಗೆ ಸಂಪರ್ಕ ಕಲ್ಪಿಸುವ ಇಳಿಜಾರು ರಸ್ತೆಯ ಮೂಲಕ ಹರ್‌ಪ್ರೀತ್ ಸಿಂಗ್ ಕಾರು ಚಲಾಯಿಸಿದ್ದರು. ದಿಕ್ಕು ತಪ್ಪಿ ತಪ್ಪಿ ಸ್ಟೇಷನ್ ಪ್ರವೇಶಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.
Next Story





