ಚೆನ್ನೈ ಜೈಲಿಗೆ ವರ್ಗಾಯಿಸಲು ಶಶಿಕಲಾ ಮನವಿ

ಬೆಂಗಳೂರು, ಫೆ. 20: ಆದಾಯ ಮೀರಿದ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಸಜೆ ಅನುಭವಿಸುತ್ತಿರುವ ಎಐಎಡಿಎಂಕೆಯ ಅಧಿನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರು ತನ್ನನ್ನು ಚೆನ್ನೈನ ಜೈಲಿಗೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೆಳಗ್ಗೆ ವಕೀಲರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರುವ ಶಶಿಕಲಾ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಫೆ.೧೫ರಂದು ಜೈಲು ಸೇರಿರುವ ಶಶಿಕಲಾ ಇದೀಗ ಕರ್ನಾಟದಿಂದ ಚೆನ್ನೈಗೆ ವರ್ಗಾಯಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಚೆನ್ನೈನ ಜೈಲು ಅಧಿಕಾರಿಗಳು ಒಪ್ಪಿದರೆ ಶಶಿಕಲಾ ಅವರನ್ನು ಚೆನ್ನೈಗೆ ವರ್ಗಾಯಿಸಲು ಸಾಧ್ಯ ಎಂದು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಪುಳಲ್ ಎಂಬಲ್ಲಿ ಕೇಂದ್ರ ಕಾರಾಗೃಹ ಇದೆ. ಇದೇ ವೇಳೆ ನೂತನ ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಶಶಿಕಲಾರನ್ನು ಚೆನೈಗೆ ಕರೆ ತರುವುದಾಗಿ ಹೇಳಿದ್ದಾರೆ.
Next Story





