ಚೆಕ್ ಬೌನ್ಸ್: ಬ್ಯಾಂಕ್ ಎದುರಲ್ಲೇ ವಿಷ ಸೇವಿಸಿ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು, ಫೆ.20: ಚೆಕ್ ಬೌನ್ಸ್ ಆದ ಪರಿಣಾಮ ಬ್ಯಾಂಕ್ ಎದುರು ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಡೂರು ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ನಡೆದಿದೆ.
ಡೆತ್‌ನೋಟ್ ಬರೆದಿಟ್ಟು ದರ್ಶನ್(28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲೂಕಿನ ಕಂಸಾಗರ ಗ್ರಾಮದ ಯುವಕ ಹಾಲು ವ್ಯಾಪಾರ ಸಂಬಂಧ ಆನಂದಪ್ಪ ಎಂಬವರು ನೀಡಿದ್ದ 60 ಸಾವಿರ ರೂ.ಗಳ ಚೆಕ್ ಬೌನ್ಸ್ ಆದ ಪರಿಣಾಮ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆನಂದಪ್ಪ ಎಂಬವರು ದರ್ಶನಗೆ ಹಾಲು ವ್ಯಾಪಾರ ಸಂಬಂಧ 1.60 ಸಾವಿರ ಹಣ ನೀಡಲು ಸತಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಸೋಮವಾರ 60 ಸಾವಿರದ ರೂಗಳ ಚೆಕ್‌ನ್ನು ಯುವಕನ ಕೈಗೆ ಬರೆದು ಕೊಟ್ಟಿದ್ದರು. ಆದರೆ ಅದು ಬೌನ್ಸ್ ಆದ ಪರಿಣಾಮ ಆತ್ಮಹತ್ಯೆಗೆ ಶರಣಾಗಿದ್ದು, ಆನಂದಪ್ಪ ವಿರುದ್ಧ ಡೆತ್ ನೋಟ್ ಬರೆದಿಟ್ಟು ಬ್ಯಾಂಕ್ ಎದುರು ವಿಷ ಸೇವಿಸಿದ್ದಾನೆ.
ನಂತರ ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
Next Story





