ಎಲ್‌ಡಿಎಫ್ ಸಭೆಯಲ್ಲಿ ಸರಕಾರದ ನಿಧಾನಗತಿಗೆ ಟೀಕೆ
ತಿರುವನಂತಪುರಂ, ಫೆ.20: ಎಲ್‌ಡಿಎಫ್ ಸಭೆಯಲ್ಲಿ ಸರಕಾರದ ನಿಧಾನಗತಿಗೆ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯದಲ್ಲಿ ಸಚಿವರಿಂದ ವರದಿ ಕೇಳಿದ್ದೇನೆ.ಅದು ಸಿಕ್ಕಿದ ಕೂಡಲೇ ಆ ಬಗ್ಗೆ ಎಲ್‌ಡಿಎಫ್‌ಸಭೆಯಲ್ಲಿ ವಿವರವಾಗಿ ಚರ್ಚಿಸುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ತಲೆದೋರಿದ ಸಿಪಿಎಂ-ಸಿಪಿಐ ವಿವಾದವನ್ನು ಬಗೆಹರಿಸುವ ಕುರಿತು ಒಮ್ಮತ ಏರ್ಪಟ್ಟಿದೆ. ಈ ವಿಷಯವನ್ನು ಉಭಯ ಪಕ್ಷಗಳ ನಡುವಿನ ಚರ್ಚೆಯಲ್ಲಿ ಬಗೆಹರಿಸುವುದೆಂದು ಎಲ್‌ಡಿಎಫ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವಿಷಯ ಸಭೆಯಲ್ಲಿ ಚರ್ಚಿಸಿರಲಿಲ್ಲ. ಆದರೆ ಈವಿಷಯವನ್ನು ಜನತಾದಳ ಎತ್ತಿ ಹಿಡಿಯಿತು.
ಅದೇ ವೇಳೆ ಸಿಪಿಐ ವಿರುದ್ಧ ಎನ್‌ಸಿಪಿ ಮಾತಾಡಿದೆ. ಸಾರಿಗೆ ಸಚಿವರ ಮನೆಗೆ ಎಐಟಿಯುಸಿ ಮಾರ್ಚ್ ನಡೆಸಿದ್ದನ್ನು ಎನ್‌ಸಿಪಿ ವಿರೋಧಿಸಿತು. ಎಐಟಿಯುಸಿ ಕ್ರಮ ತಪ್ಪಾಗಿದೆ ಎಂದು ಎನ್‌ಸಿಪಿ ಹೇಳಿತು. ಇಂತಹ ಪ್ರಮಾದಗಳು ಇನ್ನು ನಡೆಯುವುದಿಲ್ಲ ಎಂದು ಸಿಪಿಐ ಭರವಸೆ ನೀಡಿದೆ.
ರೇಷನ್, ಬರ ವಿಷಯದಲ್ಲಿ ಸರ್ವಪಕ್ಷ ಸಭೆಕರೆಯಲು ಎಲ್‌ಡಿಎಫ್ ಸಭೆ ತೀರ್ಮಾನಿಸಿತು. ಈ ತಿಂಗಳು 22ನೆ ತಾರೀಕಿಗೆ ಸರ್ವಪಕ್ಷ ಸಭೆ ಕರೆಯುವುದೆಂದು ನಿರ್ಧರಿಸಲಾಯಿತೆಂದು ವರದಿ ತಿಳಿಸಿದೆ.