ಮಂಗಳೂರು: ಎವರಿ ಡೇ ಸೂಪರ್ ಮಾರ್ಕೆಟ್ ನಿಂದ 'ಬ್ಯಾರಿ ಮೆಹ್ಫಿಲ್' ಕಾರ್ಯಕ್ರಮ

ಮಂಗಳೂರು, ಫೆ.20: ನಗರದ ಬೆಂದೂರ್‌ವೆಲ್ ಸರ್ಕಲ್ ಬಳಿಯ ಎಸ್ಸೆಲ್ ವಿಲ್‌ಕೋನ್‌ನಲ್ಲಿರುವ ನಗರದ ಪ್ರಥಮ ಸಾವಯವ ಮಳಿಗೆ 'ಎವರಿ ಡೇ ಸೂಪರ್ ಮಾರ್ಕೆಟ್' ಪ್ರಾಯೋಜಕತ್ವದಲ್ಲಿ ಫೋರಂ ಫಿಝಾ ಮಾಲ್‌ನಲ್ಲಿ ರವಿವಾರ ಮುಸ್ಸಂಜೆ 'ಎವರಿ ಡೇ ಸೂಪರ್ ಮಾರ್ಕೆಟ್-ಬ್ಯಾರಿ ಮೆಹ್ಫಿಲ್' ಕಾರ್ಯಕ್ರಮವು ಬ್ಯಾರಿ ಝುಲ್ಫಿ ನೇತೃತ್ವದಲ್ಲಿ ನಡೆಯಿತು.
ದುಂದುವೆಚ್ಚಕ್ಕೆ ಕಡಿವಾಣ, ನೀರಿನ ಮಿತಬಳಕೆ, ಆಹಾರ ದುರ್ವ್ಯಯ, ಸಂಪನ್ಮೂಲಗಳ ದುರ್ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಗರದ ಎಚ್‌ಐವಿ ಪೀಡಿತ ಮಕ್ಕಳ ಪಾಲನಾ ಕೇಂದ್ರ 'ಸ್ನೇಹದೀಪ್'ಗೆ ನೆರವು ನೀಡಲಾಯಿತು.
ಬ್ಯಾರಿ ಹಾಡುಗಾರರಾದ ಬಶೀರ್ ಅಹ್ಮದ್ ಕಿನ್ಯ, ಅಶ್ರಫ್ ಅಪೋಲೊ, ರಶೀದ್ ನಂದಾವರ, ಡಿಜೆ ಸಿರಾಜ್, ಶೌಕತ್ ಪಡುಬಿದ್ರೆ, ಶಮೀರ್ ಮುಲ್ಕಿ, ಶರೀಫ್ ಬೆಳ್ಳಾರೆ, ಝಿಯಾ ಕಲ್ಲಡ್ಕ, ಸಮದ್ ಗಡಿಯಾರ್, ಫಾಝಿಲ್ ಪರ್ತಿಪ್ಪಾಡಿ, ಅಲಿ ಸಜಿಪ, ಇಬ್ಬ ಕಡಂಬು, ಶರೀಫ್ ಪೆರ್ಲ, ರಿಯಾಝ್ ವಳವೂರು ಇವರ ಹಾಡುಗಳಿಗೆ ಸುಮಾರು 2,500ಕ್ಕೂ ಅಧಿಕ ಪ್ರೇಕ್ಷಕರು ಕಿವಿಯಾದರು.
'ಎವರಿ ಡೇ ಸೂಪರ್ ಮಾರ್ಕೆಟ್'ನ ಹಾರಿಸ್ ಇಬ್ರಾಹೀಂ, ಟಾಕ್ಸ್ ಕೇ ಫಿಶ್ ವಾಟ್ಸ್‌ಆ್ಯಪ್, ವೆಜ್ ವಾಟ್ಸ್‌ಆ್ಯಪ್‌ನ ಮುಹಮ್ಮದ್ ಇಮ್ತಿಯಾಝ್, ಉದ್ಯಮಿ ಇಬ್ರಾಹೀಂ ಅಲೆಕ್ಕಾಡಿ ಉಪಸ್ಥಿತರಿದ್ದರು.







