ಐವರ್ನಾಡು ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಮಂಗಳೂರು, ಫೆ.20: ಬೆಳ್ಳಾರೆಯ ಐವರ್ನಾಡು ಬಳಿ ನಡೆದ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅವಿನಾಶ್ ಜಗನಾಥ ಮಾರ್ಕೆ , ಅಬ್ದುಲ್ ಕರೀಮ್, ಮೊಹಮ್ಮದ್ ಹನೀಫ್, ತಾಹಿರ ಹುಸೇನ್ , ಚರಣ್ ಸಿಂಗ್ ಎಂದು ಗುರುತಿಸಲಾಗಿದೆ.
ಜ.೧ರಂದು ಅಬ್ದುಲ್ ಖಾದರ್ ಎಂಬವರ ಕಾರು ಅಡ್ಡಗಟ್ಟಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಐದು ಲಕ್ಷ ರೂ ನಗದು, ಮೊಬೈಲ್ ದೋಚಿದ್ದರು ಎನ್ನಲಾಗಿದೆ.
ಆರೋಪಿಗಳಿಗೆ ೧೫ ದಿನಗಳ ನ್ಯಾಯಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





