ತೆರೆದ ಪ್ರದೇಶದಲ್ಲಿ ಎಲ್ಲ ತ್ಯಾಜ್ಯಗಳ ಸುಡುವಿಕೆ ನಿಷೇಧಿಸಲು ಕಿರಣ್ ಆಗ್ರಹ

ಹೈದರಾಬಾದ್,ಫೆ.20: ಭಾರತೀಯರು ಉಸಿರಾಡುತ್ತಿರುವ ಗಾಳಿ ದಿನೇದಿನೇ ವಿಷಕಾರಿಯಾಗುತ್ತಿರುವುದರಿಂದ ಎಲ್ಲ ತ್ಯಾಜ್ಯಗಳನ್ನು ತೆರೆದ ಸ್ಥಳಗಳಲ್ಲಿ ಸುಡುವುದನ್ನು ನಿಷೇಧಿಸುವಂತೆ ಬಯೊಕಾನ್ ಅಧ್ಯಕ್ಷೆ ಕಿರಣ್ ಮುಜುಮ್ದಾರ್-ಶಾ ಅವರು ಆಗ್ರಹಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ವಾಹನಗಳು ಸೂಸುವ ಹೊಗೆ ಮತ್ತು ವಿಷಕಾರಿ ತ್ಯಾಜ್ಯಗಳ ಸುಡುವಿಕೆ ವಾಯುಮಾಲಿನ್ಯವನ್ನು ಹೆಚ್ಚಿಸುತ್ತಿರುವ ಪ್ರಮುಖ ಅಂಶಗಳಾಗಿವೆ. ವಾಹನಗಳ ಹೊಗೆ ಸೂಸುವಿಕೆಯನ್ನು ನಿಯಂತ್ರಿಸುವ ಮತ್ತು ತೆರೆದ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಸುಡುವುದನ್ನು ನಿಷೇಧಿಸುವ ಕಠಿನ ನೀತಿಗಳು ಜಾರಿಗೆ ಬರಬೇಕಾಗಿವೆ. ಯಾವುದೇ ತ್ಯಾಜ್ಯವನ್ನು ಮುಚ್ಚಿದ ಇನ್‌ಸಿನರೇಟರ್‌ಗಳಲ್ಲಿಯೇ ದಹಿಸಬೇಕು ಎಂದರು.
ಭಾರತದಲ್ಲಿ ಪ್ರತಿವರ್ಷ ಹತ್ತು ಲಕ್ಷಕ್ಕೂ ಅಧಿಕ ಜನರು ವಾಯುಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಇತ್ತೀಚಿಗೆ ವರದಿ ಮಾಡಿದೆ.
Next Story