ರೈಲಿನಲ್ಲಿ ಮಹಿಳೆಗೆ ಕಿರುಕುಳ: ಯೋಧನ ಬಂಧನ

ತಿರುವನಂತಪುರ,ಫೆ.20: ಮೇಘಾಲಯದ ಮಹಿಳಾ ಪ್ರಯಾಣಿಕರೊಬ್ಬರು ಕೇರಳದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಗೆ ಕಿರುಕುಳ ನೀಡಿದ್ದನೆನ್ನಲಾದ ಸೈನಿಕನೊಬ್ಬನೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ರೈಫಲ್ಸ್‌ನ ಯೋಧನಾದ 32 ವರ್ಷ ವಯಸ್ಸಿನ ಸಿಮ್ಸನ್‌ನನ್ನು ರವಿವಾರ ರಾತ್ರಿ ಎರ್ನಾಕುಲಂನ ಆತನ ನಿವಾದಿಂದ ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.
ಫೆಬ್ರವರಿ 17ರಂದು ಗುವಾಹಟಿ-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲಿನಲ್ಲಿ ತಾನು ಪ್ರಯಾಣಿಸುತ್ತಿದ್ದಾಗ, ಪಾನಮತ್ತನಾಗಿದ್ದ ಆರೋಪಿಯು ತನ್ನ ಮೇಲೆ ಹಲ್ಲೆ ನಡೆಸಿದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯು ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದಾಗ ಆರೋಪಿ ಯೋಧನು ಎರ್ನಾಕುಲಂನಲ್ಲಿ ರೈಲನ್ನೇರಿದ್ದ. ತಿರುವನಂತಪುರಂ ತಲುಪಿದ ಬಳಿಕ ಮಹಿಳೆಯು ಘಟನೆಯ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಳು.
ಆರೋಪಿ ಸಿಮ್ಸನ್ ವಿರುದ್ಧ ಭಾರತೀಯ ದಂಡಸಂಹಿತೆ 354 ಸೆಕ್ಷನ್‌ನಡಿ ದೂರು ದಾಖಲಿಸಲಾಗಿದೆ.