ಡಬ್ಲುಟಿಎ ರ್ಯಾಂಕಿಂಗ್: ವೊಝ್ನಿಯಾಕಿಗೆ ಭಡ್ತಿ
: ಇತ್ತೀಚೆಗೆ ಕತರ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಡೆನ್ಮಾರ್ಕ್ ಆಟಗಾರ್ತಿ ಕ್ಯಾರೊಲಿನ್ ವೊಝ್ನಿಯಾಕಿ ಸೋಮವಾರ ಇಲ್ಲಿ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ 15ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಸೆರೆನಾ ವಿಲಿಯಮ್ಸ್ ನೇತೃತ್ವದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಕೇವಲ ಒಂದು ಬದಲಾವಣೆಯಾಗಿದ್ದು, ವೊಝ್ನಿಯಾಕಿ ಮೂರು ಸ್ಥಾನ ಭಡ್ತಿ ಪಡೆದು 15ನೆ ಸ್ಥಾನ ತಲುಪಿದ್ದಾರೆ. ವೊಝ್ನಿಯಾಕಿಯವರನ್ನು ಮಣಿಸಿ ಕತರ್ ಓಪನ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿರುವ ಝೆಕ್‌ನ ಕರೊಲಿನಾ ಪ್ಲಿಸ್ಕೋವಾ 3ನೆ ರ್ಯಾಂಕಿನಲ್ಲಿದ್ದಾರೆ.
ಡಬ್ಲುಟಿಎ ರ್ಯಾಂಕಿಂಗ್: 1. ಸೆರೆನಾ ವಿಲಿಯಮ್ಸ್(ಅಮೆರಿಕ),2. ಆ್ಯಂಜೆಲಿಕ್ ಕೆರ್ಬರ್(ಜರ್ಮನಿ), ಕಾರೊಲಿನ್ ಪ್ಲಿಸ್ಕೋವಾ(ಝೆಕ್), 4.ಸಿಮೊನಾ ಹಾಲೆಪ್(ರೊಮಾನಿಯ),5.ಡೊಮಿನಿಕಾ ಸಿಬುಲ್ಕೋವಾ(ಸ್ಲೋವಾಕಿಯ), 6. ಅಗ್ನೆಸ್ಕಾ ರಾಂಡ್ವಾಂಸ್ಕಾ(ಪೊಲೆಂಡ್), 7.ಗಾರ್ಬೈನ್ ಮುಗುರುಝ(ಸ್ಪೇನ್), 8.ಸ್ವೆತ್ಲಾನಾ ಕುಝ್ನೆಸೋವಾ(ರಶ್ಯ), 9.ಮ್ಯಾಡಿಸನ್ ಕೀಯ್ಸಾ(ಅಮೆರಿಕ), 10.ಜೊಹನ್ನಾ ಕಾಂಟಾ(ಬ್ರಿಟನ್).





