ಫೆ.23: ಅಮೃತಾನಂದಮಯಿ ಮಂಗಳೂರಿಗೆ
ಮಂಗಳೂರು, ಫೆ.20: ಮಾತಾಶ್ರೀ ಅಮೃತಾನಂದಮಯಿ ದೇವಿ ಫೆ.23ರಂದು ಮಂಗಳೂರಿಗೆ ಆಗಮಿಸಲಿದ್ದು, ಅಂದು ಸಂಜೆ 6ಕ್ಕೆ ಬೋಳೂರಿನ ಅಮೃತ ವಿದ್ಯಾಲಯಮ್ ವಠಾರದಲ್ಲಿ ಸಾರ್ವಜನಿಕ ಕಾರ್ಯಕ್ರಮ ಜರಗಲಿದೆ ಎಂದು ಮಠದ ಸೇವಾ ಸಮಿತಿ ಅಧ್ಯಕ್ಷೆ ಶ್ರುತಿ ಸನತ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾ ಯೋಜನೆಯ ಅಂಗವಾಗಿ ವಿಕಲಚೇತನರಿಗೆ ಗಾಲಿ ಕುರ್ಚಿಗಳ ವಿತರಣೆ, ಅಮಲ ಭಾರತ ಅಭಿಯಾನದ ಅಂಗವಾಗಿ ಶಾಲೆಗಳಿಗೆ ಕಸದ ಬುಟ್ಟಿ ವಿತರಣೆ, ಆರ್ಥಿಕ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಅಮೃತ ಶ್ರೀ ಮಹಿಳಾ ಸಬಲೀಕರಣ ಯೋಜನೆಯ ಸ್ವಸಹಾಯ ಗುಂಪುಗಳಿಗೆ ಚಾಲನೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಯೋಜನೆ, ಹಿರಿಯ ನಾಗರಿಕರಿಗೆ ಆಯುಷ್ ಕಿಟ್ ವಿತರಣೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ವಾಮನ್ ಕಾಮತ್, ಮಾತಾ ಅಮೃತಾನಂದಮಯಿ ಮಠದ ಕಾರ್ಯದರ್ಶಿ ಅಶೋಕ್ ಶೆಣೈ, ಪ್ರಮುಖರಾದ ಬದ್ರಿನಾಥ ಕಾಮತ್, ಮಾಧವ ಸುವರ್ಣ ಉಪಸ್ಥಿತರಿದ್ದರು.





