ಫೆ.23: ‘ಎನ್ನ ಯೇಸು’ ಧ್ವನಿ ಸುರುಳಿ ಬಿಡುಗಡೆ
ಮಂಗಳೂರು, ಫೆ.20: ಸ್ನೇಹಾಲಯ ಅನಾಥಾಶ್ರಮದ ಆಶ್ರಯದಲ್ಲಿ ‘ಎನ್ನ ಯೇಸು’ ಧ್ವನಿ ಸುರುಳಿಯನ್ನು ಫೆ.23ರಂದು ಪೂ.11:30ಕ್ಕೆ ನಗರದ ಬಿಕರ್ನಕಟ್ಟೆಯ ಬಾಲಯೇಸು ಮಂದಿರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕ್ಲಿಫೋರ್ಡ್ ಲಿಯೋ ಡಿಸೋಜ ಸೋಮವಾರ ಸುದ್ದಗೋಷ್ಠಿಯಲ್ಲಿ ತಿಳಿಸಿದರು.
‘ಎನ್ನ ಯೇಸು’ ಸಿಡಿಯಲ್ಲಿ ಯೇಸು ಕುರಿತು 13 ಹಾಡುಗಳಿವೆ. ಈ ಧ್ವನಿ ಮುದ್ರಣದಲ್ಲಿ 9 ಮಂದಿ ಗಾಯಕರು, 21 ಮಂದಿ ವಾದ್ಯವೃಂದದವರು, 6 ಮಂದಿ ತಾಂತ್ರಿಕ ವರ್ಗದವರು ಸಹಕರಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸ್ನೇಹಾಲಯದ ಜೋಸೆಫ್ ಕ್ರಾಸ್ಟಾ, ಸಿಸಿಲಿಯೊ ಡಿಸೋಜ, ಫಿಲೋಮಿನಾ ಲಿಯೋ ಡಿಸೋಜ ಉಪಸ್ಥಿತರಿದ್ದರು.
Next Story





