ನಾಳೆಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆ
ಮಂಗಳೂರು, ಫೆ.20: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಫೆ.22ರಿಂದ 25ರವರೆಗೆ ಅಂತರ್ ಕಾಲೇಜು ಸಂಗೀತ, ಕಲೆ ಮತ್ತು ಕ್ರೀಡಾ ಸ್ಪರ್ಧೆ ಅಡ್ರಿನಾಲಿನ್-2017 ಆಯೋಜಿಸಲಾಗಿದೆ.
ಮೂರನೆ ವರ್ಷದ ಅಡ್ರಿನಾಲಿನ್-2017 ಸ್ಪರ್ಧೆಯು 40ಕ್ಕೂ ಹೆಚ್ಚು ಸಾಂಸ್ಕೃತಿಕ, ಸಾಹಿತ್ಯಿಕ, ಕುಶಲಕಲೆ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಗಾಯಕಿ, ಮಲಯಾಳಂ ಟಿವಿ ನಿರೂಪಕಿ ರಿಮಿ ಟೋಮಿ ಆಗಮಿಸುವರು. ಸಮಾರೋಪ ಸಮಾರಂಭದಲ್ಲಿ ಇಂಡಿ-ಫೋಕ್-ಆಲ್ಟರ್‌ನೇಟಿವ್ ಬ್ಯಾಂಡ್ ವೆನ್ ಚಾಯ್ ಮೆಟ್ ಟೋಸ್ಟ್ ಕಾರ್ಯಕ್ರಮ ನಡೆಸಿಕೊಡಲಿದೆ. ವೈವಿಧ್ಯಮಯ ಸ್ಪರ್ಧೆಗಳ ಜೊತೆಗೆ ಈ ಉತ್ಸವದಲ್ಲಿ ಆರು ಹೊಸ ಕೌಶಲಗಳನ್ನು ಕಲಿಯುವ ಅವಕಾಶ ಲಭ್ಯವಾಗಲಿದೆ. ಎಲ್ಲ ಕಾರ್ಯಾಗಾರಗಳನ್ನು ವೃತ್ತಿಪರರು ನಡೆಸಿಕೊಡಲಿದ್ದು, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಸಲುವಾಗಿ ಕನಿಷ್ಠ ಶುಲ್ಕ ನಿಗದಿಪಡಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಫಾದರ್ ಮುಲ್ಲರ್ ಮುಖ್ಯ ಕ್ರೀಡಾಂಗಣದಲ್ಲಿ ಇದು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.





