ಉಳ್ಳಾಲ: ಶೈಖ್ ರಿಫಾಯಿ ಅನುಸ್ಮರಣಾ ಕಾರ್ಯಕ್ರಮ

ಉಳ್ಳಾಲ, ಫೆ.21: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಆಝಾದ್ ನಗರ ಶಾಖೆಯ ಆಶ್ರಯದಲ್ಲಿ ಶೈಖ್ ರಿಫಾಯಿ ಖ.ಸಿ ಅನುಸ್ಮರಣಾ ಕಾರ್ಯಕ್ರಮ ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಳ್ಳಾಲರವರ ಅಧ್ಯಕ್ಷತೆಯಲ್ಲಿ ಆಝಾದ್ ನಗರದ ಮಂಚಿಲ ಮುಸ್ತಫ ಪ್ಯಾಲೇಸ್ ನಲ್ಲಿ ಜರುಗಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ದುವಾ ನೆರವೇರಿಸಿದರು. ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರು ಹಾಗು ಎಸ್ ವೈಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹನೀಫ್ ಹಾಜಿ ಮಾಸ್ತಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ ವೈಎಸ್ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಸಅದಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ಹಾಗೂ ಆಝಾದ್ ನಗರ ಫಾರೂಖ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಾಗೂ ಉಳ್ಳಾಲ ನಗರಸಭಾ ಸದಸ್ಯ ಶೌಕತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೀರು ಕುಡಿಯುವಾಗ ಪಾಲಿಸಬೇಕಾದ ಆರು ಪ್ರವಾದಿ ಸುನ್ನತ್ ಗಳನ್ನು ತಿಳಿಸುವ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.
ಎಸ್ ವೈ ಎಸ್ ನಾಯಕ ಆರ್ .ಕೆ.ರಫೀಕ್, ಎಸ್ಸೆಸ್ಸೆಫ್ ಆಝಾದ್ ನಗರ ಕೋಶಾಧಿಕಾರಿ ಹಾಶಿಂ ಹಾಗೂ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







