ಮರ್ಸಿಡಿಸ್‌ನ ಈ ಹೊಸ ವಾಹನ ಇಡೀ ವಿಶ್ವದಲ್ಲಿ ಕೇವಲ 99 ಮಂದಿಗೆ ಲಭ್ಯ !
ಏನಿದೆ ಅಂತಹ ವಿಶೇಷತೆ ಇದರಲ್ಲಿ ?

ವಿಶ್ವವಿಖ್ಯಾತ ಕಾರು ತಯಾರಿಕೆ ಸಂಸ್ಥೆ ಮರ್ಸಿಡಿಸ್ ತನ್ನ ಐಷಾರಾಮಿ ಮೇಬ್ಯಾಕ್ ಸರಣಿಯ ಮುಂದಿನ ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ ಆವೃತ್ತಿಯ ಕೇವಲ 99 ಕಾರುಗಳು ಮಾತ್ರ ತಯಾರಾಗಲಿದ್ದು, ಮುಂದಿನ ವರ್ಷದ ವೇಳೆಗೆ ಮಾರುಕಟ್ಟೆಗೆ ಬರಲಿವೆ.
ಮರ್ಸಿಡಿಸ್ ಜಿ 650 ಲ್ಯಾಂಡಾಲೆಟ್ ಎಂದು ಹೆಸರಿಸಲಾಗಿರುವ ಈ ಕಾರು ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದ್ದು, ನಿಮ್ಮ ಸುಪ್ಪತ್ತಿಗೆಗಿಂತಲೂ ಹೆಚ್ಚು ಆರಾಮದಾಯಕವಾಗಿದೆ.
ನಿಮಗಾಗಿ ಕಾರಿನ ಚಿತ್ರಗಳು ಇಲ್ಲಿವೆ,ನೋಡಿಕೊಳ್ಳಿ....
![]()
ಲ್ಯಾಂಡಾಲೆಟ್ ಕೆಲ ಸಮಯದ ವಿರಾಮದ ಬಳಿಕ 2015ರಲ್ಲಿ ಪುನರುಜ್ಜೀವನಗೊಂಡ ಮೇಬ್ಯಾಕ್ ಸರಣಿಯ ಮೊದಲ ಆಫ್-ರೋಡರ್ ಆವೃತ್ತಿಯಾಗಿದೆ. ಮರ್ಸಿಡಿಸ್ ಮೇಬ್ಯಾಕ್ ಬ್ರಾಂಡ್‌ಗೆ ಮತ್ತೆ ಚಾಲನೆ ನೀಡಿದ ಸಂದರ್ಭದಲ್ಲಿ ಎಸ್-ಕ್ಲಾಸ್ ಕಾರನ್ನು ಮೊದಲು ಅನಾವರಣಗೊಳಿಸಿತ್ತು. (ಕೆಳಗಿನ ಚಿತ್ರ)
![]()
ನಂತರ ಮರ್ಸಿಡಿಸ್ ಮೇಬ್ಯಾಕ್ ಸರಣಿಗಾಗಿ ತನ್ನ ಎಸ್650 ಕಾರನ್ನು ಬಿಡುಗಡೆ ಗೊಳಿಸಿತ್ತು.
![]()
ಇದೀಗ ಮರ್ಸಿಡಿಸ್ ತನ್ನ ತೀರ ಇತ್ತೀಚಿನ ಜಿ 650 ಅನ್ನು ಅನಾವರಣಗೊಳಿಸಿದೆ. ಈ ಕಾರಿನ ತಳಭಾಗ ನೆಲದಿಂದ ಹೆಚ್ಚುಕಡಿಮೆ ಎರಡು ಅಡಿ ಎತ್ತರದಲ್ಲಿದೆ.
![]()
ಮುಂಭಾಗದ ಆಸನದಲ್ಲಿ ಪ್ರಯಾಣಿಸುವವರು ಸಾಂಪ್ರದಾಯಿಕ ಮುಚ್ಚಿದ ಛಾವಣಿಯಡಿ ಕುಳಿತಿದ್ದರೆ, ಹಿಂದಿನ ಆಸನಗಳಲ್ಲಿ ಪ್ರಯಾಣಿಸುವವರು ತಮ್ಮ ತಲೆಯ ಮೇಲಿನ ಛಾವಣಿಯ ಕಿಟಕಿಯನ್ನು ತೆರೆದರೆ ಆಗಸ ಕಾಣುತ್ತದೆ,ಜೊತೆಗೆ ಹೊರಗಿನ ಗಾಳಿಯನ್ನೂ ಅನುಭವಿಸಬಹುದು.
![]()
ಹಿಂದಿನ ಮತ್ತು ಮುಂದಿನ ಆಸನಗಳಲ್ಲಿಯ ಪ್ರಯಾಣಿಕರನ್ನು ಪ್ರತ್ಯೇಕಿಸಲು ಮಧ್ಯೆ ಗಾಜಿನ ತೆರೆಯೂ ಇದೆ.
![]()
ಕಾರಿನ ಒಳಭಾಗವನ್ನು ಗರಿಷ್ಠ ಹಿತಾನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಪ್ರತ್ಯೇಕ ಆಸನಗಳಿದ್ದು, ಕೆಳಬೆನ್ನಿಗೆ ಆಧಾರವನ್ನು ಹೆಚ್ಚಿಸಲು ಇನ್‌ಫ್ಲೇಟೇಬಲ್ ಏರ್ ಚೇಂಬರ್‌ಗಳನ್ನು ಹೊಂದಿವೆ. ಹಾಟ್ ಸ್ಟೋನ್ ಮಸಾಜ್‌ನ ಅನುಭವ ನೀಡುವ ಮಸಾಜ್ ಪ್ರೋಗ್ರಾಮ್‌ಗಳನ್ನೂ ಇವುಗಳಲ್ಲಿ ವಿನ್ಯಾಸ ಗೊಳಿಸಲಾಗಿದೆ.
![]()
ಹಿಂಬದಿಯ ಪ್ರಯಾಣಿಕರು ತಮ್ಮ ಪಾನೀಯವನ್ನು ಬಿಸಿ ಅಥವಾ ತಂಪಾಗಿರಿಸಲು ದೊಡ್ಡದಾದ ಥರ್ಮಲ್ ಕಪ್ ಹೋಲ್ಡರ್‌ಗಳನ್ನು ಅಳವಡಿಸಲಾಗಿದೆ.
![]()
ಇಷ್ಟೆಲ್ಲ ಇರುವಾಗ ಮನೋರಂಜನೆ ಬೇಡವೇ ? ಅದಕ್ಕಾಗಿ ಹಿಂಬದಿಯ ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕವಾಗಿ 10 ಇಂಚಿನ ಹೈ ರೆಸೊಲ್ಯೂಷನ್ ಸ್ಕ್ರೀನ್‌ಗಳಿವೆ.
![]()
ಲಿಮೋಸಿನ್ ಶೈಲಿಯ ಒಳಭಾಗವಿದ್ದರೂ ಯಾವುದೇ ಪ್ರದೇಶದಲ್ಲಿಯೂ ಸುಲಭವಾಗಿ ಚಲಿಸುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ನೆಲದಿಂದ 1.7 ಅಡಿ ಎತ್ತರವಿದ್ದು, ವಿ12 ಬೈಟರ್ಬೊ ಇಂಜಿನ್‌ನ್ನು ಅಳವಡಿಸಲಾಗಿದೆ. ಇದು 630 ಎಚ್‌ಪಿ ಮತ್ತು ಪ್ರತಿ ಅಡಿಗೆ 738 ಪೌಂಡ್ ಟಾರ್ಕ್ ಉತ್ಪಾದಿಸುತ್ತದೆ.
![]()
ಈ ಕಾರಿನ ಮಾರಾಟ ಬೆಲೆಯನ್ನು ಮರ್ಸಿಡಿಸ್ ಬಹಿರಂಗಗೊಳಿಸಿಲ್ಲ. ಕೇವಲ 99 ಕಾರುಗಳು ಮಾತ್ರ ತಯಾರಾಗಲಿದ್ದು, ಮೇಬ್ಯಾಕ್ ಸರಣಿಯ ಇತರ ಎರಡು ಕಾರುಗಗಳ ಬೆಲೆಗಳನ್ನು ಪರಿಗಣಿಸಿದರೆ ಪ್ರತಿ ಕಾರಿನ ಬೆಲೆ ಮೂರು ಲಕ್ಷ ಡಾಲರ್‌ಗಿಂತ ಮೇಲೆಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ.







