ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಶ್ರೀರಾಮ ಸೇನೆ ಬೆಂಬಲ
ಮಂಗಳೂರು,ಫೆ.21:ಶ್ರಿರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೂ ಬಹಿರಂಗ ಭಾಷಣ ಮಾಡಲು ಅವಕಾಶ ನೀಡಬೇಕು ಎಂದು ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಸುದ್ದಿಗೊಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸಿಪಿಎಂ ಪಕ್ಷದ ಮುಖಂಡ ಕೇರಳದ ಮುಖ್ಯ ಮಂತ್ರಿಯವರ ಮೇಲೂ ಸಾಕಷ್ಟು ಆರೋಪಗಳಿವೆ ಆ ಕಾರಣದಿಂದ ಅವರಿಗೆ ಜಿಲ್ಲೆಯಲ್ಲಿ ಬಹಿರಂಗ ಭಾಷಣ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆಯ ವಿಭಾಗೀಯ ಸಂಚಾಲಕ ಆನಂದ ಶೆಟ್ಟಿ ತಿಳಿಸಿದ್ದಾರೆ.
ನಾವು ಬಂದ್‌ಗೆ ಕರೆ ನೀಡಿಲ್ಲ:
ಶ್ರೀರಾಮ ಸೇನೆ ಫೆ.2ರಂದು ಬಂದ್‌ಗೆ ಕರೆ ನೀಡಿಲ್ಲಾ ಆದರೆ ವಿಎಚ್‌ಪಿ ಹಾಗೂ ಬಜರಂಗದಳ ಬಂದ್‌ಗೆ ಕರೆ ನೀಡಿರುವುದಕ್ಕೆ ನಮ್ಮ ಬೆಂಬಲವಿದೆ. ಕೇರಳದಲ್ಲಿ ಕೇರಳದಲ್ಲಿ ರಾಜಕೀಯ ಕಾರಣಗಳಿಗಾಗಿ ನಡೆಯುವ ಹಿಂದುಗಳ ಹತ್ಯೆಯನ್ನು ಬಿಜೆಪಿ ಅಥವಾ ಸಿಪಿಎಂ ನಡೆಸಿದ್ದರೆ ಎರಡನ್ನೂ ಶ್ರೀರಾಮ ಸೇನೆ ಖಂಡಿಸುತ್ತದೆ ಎಂದು ಆನಂದ ಶೆಟ್ಟಿ ತಿಳಿಸಿದರು.
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಕಳೆದ 5ವರ್ಷದಿಂದ ಕರ್ನಾಟಕದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ.ಗೋವಾದಲ್ಲೂ ಅವರ ಮೇಲಿರುವ ನಿಷೇಧ ತೆರವುಗೊಳಿಸಲು ಶ್ರೀರಾಮ ಸೇನೆ ಕಾನೂನು ಹೋರಾಟ ನಡೆಸುತ್ತದೆ ಎಂದು ಆನಂದ ಶೆಟ್ಟಿ ತಿಳಿಸಿದ್ದಾರೆ.





