ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರಿಂದ ಮನವಿ

ಮಂಗಳೂರು, ಫೆ.21: ನಗದ ಬೀದಿ-ಬದಿ ವ್ಯಾಪಾರಸ್ಥರ ಬೇಡಿಕೆ ಈಡೇರಿಸಲು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರಿಗೆ ಬೀದಿ ಬದಿ ವ್ಯಾಪಾಸ್ಥರು ಮನವಿ ಸಲ್ಲಿಸಿದರು.
ಪಾಲಿಕೆ ವ್ಯಾಪ್ತಿಯ ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ಅವಿದ್ಯಾವಂತ ಬಡವರು ಇತ್ತೀಚೆಗೆ ಹಲವಾರು ರೀತಿಯ ತೊಂದರೆಗಳನ್ನು ಅನುಭಸುವಿತ್ತಿದ್ದಾರೆ. ಆ ಹಿನ್ನೆಲಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರೊಂದಿಗೆ ಐವನ್ ಡಿಸೋಜ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಮನಪಾ ಆಯುಕ್ತ ನಝೀರ್‌ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಂದಾಯ ಅಧಿಕಾರಿ ಪ್ರವೀಣ್, ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಎಮ್ಮೆಕೆರೆ ಸಲಾಂ, ಹಕೀಂ ವಾಮಂಜೂರು, ಮುಹಮ್ಮದ್ ಹನೀಫ್, ಜಯಾನಂದ, ಅಬ್ದುಲ್ ಖಾದರ್, ಹಸನ್ ಕುದ್ರೋಳಿ, ಅವಿನಾಶ್ ಜೊತೆಗಿದ್ದರು.
Next Story





