ಮಂಗಳೂರು: ಶಾಸಕ ಲೋಬೊರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ

ಮಂಗಳೂರು, ಫೆ.21: ರಾ.ಹೆ.66ರ ಪಂಪ್‌ವೆಲ್ ವೃತ್ತದಿಂದ ಜಪ್ಪಿನಮೊಗರು-ಎಕ್ಕೂರುವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೊ ಪರಿಶೀಲನೆ ಮಾಡಿದರು.
ರಾಷ್ಟೀಯ ಹೆದ್ದಾರಿ ಅಧಿಕಾರಿ ಹಾಗೂ ಮನಪಾ ಅಧಿಕಾರಿಗಳು, ಮನಪಾ ಸದಸ್ಯರೊಂದಿಗೆ ಕಾಮಗಾರಿಗಳಿಂದ ತೊಂದರೆಗೊಳಗಾದ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಶಾಸಕ ಲೋಬೊ ಚರ್ಚೆ ನಡೆಸಿದರಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಸೂಚಿಸಿದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟೃ್ ಡೈರೆಕ್ಟರ್ ಸ್ಯಾಮ್ಸ್ ಸನ್ ವಿಜಯ ಕುಮಾರ್, ಮನಪಾ ಅಧಿಕಾರಿಗಳಾದ ಗುರುರಾಜ್ ಮರಳಹಳ್ಳಿ, ರಘುಪಾಲ್, ಬಾಲಕೃಷ್ಣ ಗೌಡ, ನರೇಶ್ ಶೆಣೈ, ರೂಪಾ, ಮನಪಾ ಸದಸ್ಯರಾದ ಆಶಾ ಡಿಸಿಲ್ವಾ, ಲ್ಯಾನ್ಸಿ ಲಾಟ್ ಪಿಂಟೊ, ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಹಾಗೂ ಪ್ರಭಾಕರ್ ಶ್ರೀಯಾನ್, ಶಶಿಧರ್, ನೀರಜ್ ಪಾಲ್, ಅಲ್ವಾರಿಸ್ ಡಿಸಿಲ್ವ, ಜಗನ್ನಾಥ ಶೆಟ್ಟಿ, ಹರ್ಬಟ್ ಡಿಸೋಜ, ಹೇಮಂತ್ ಗರೋಡಿ ಉಪಸ್ಥಿತರಿದ್ದರು.
Next Story





