Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿಶ್ವದಾದ್ಯಂತ ಹಿಂದೆಂದಿಗಿಂತಲೂ...

ವಿಶ್ವದಾದ್ಯಂತ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ ಶಸ್ತ್ರಾಸ್ತ್ರ ಖರೀದಿ

ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ವಿಶ್ವದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ21 Feb 2017 7:30 PM IST
share
ವಿಶ್ವದಾದ್ಯಂತ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ ಶಸ್ತ್ರಾಸ್ತ್ರ ಖರೀದಿ

ಟಾಪ್ 5 ಶಸ್ತ್ರಾಸ್ತ್ರ ಆಮದು ರಾಷ್ಟ್ರಗಳು

ಭಾರತ, ಸೌದಿ, ಯುಎಇ, ಚೀನಾ, ಅಲ್ಜೀರಿಯ

2007 ಹಾಗೂ 2011ರ ಮಧ್ಯೆ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ.9.7 ಆಗಿದ್ದು, ಇದು ಈವರೆಗೂ ಇತರ ಯಾವುದೇ ರಾಷ್ಟ್ರಗಳಿಗಿಂತ ಅಧಿಕವೆಂದು ಸ್ಟಾಕ್‌ಹೋಮ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆ.

   ಲಂಡನ್,ಫೆ.21: 1990ರಿಂದೀಚೆಗೆ ಜಾಗತಿಕ ಶಸ್ತ್ರಾಸ್ತ್ರ ಮಾರಾಟವು ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದು, ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆಯೆಂದು ಸ್ಟಾಕ್‌ಹೋಮ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ವರದಿಯೊಂದು ಬಹಿರಂಗಪಡಿಸಿದೆ.

  2012 ಹಾಗೂ 2016ರ ಮಧ್ಯೆ ನಡೆದ ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.13ರಷ್ಟು ಪಾಲು ಭಾರತದ್ದಾಗಿದ್ದು, ಸೌದಿ ಆರೇಬಿಯ, ಯುಎಇ, ಚೀನಾ ಹಾಗೂ ಅಲ್ಜೀರಿಯ ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆಯೆಂದು ಎಸ್‌ಐಪಿಆರ್‌ಐ ವರದಿ ತಿಳಿಸಿದೆ. 2007 ಹಾಗೂ 2011ರ ಮಧ್ಯೆ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಶೇ.9.7 ಆಗಿದ್ದು, ಇದು ಈವರೆಗೂ ಇತರ ಯಾವುದೇ ರಾಷ್ಟ್ರಗಳಿಗಿಂತ ಅಧಿಕವೆಂದು ಸಂಸ್ಥೆಯು ಪ್ರಕಟಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.

ಬಹುತೇಕ ಗಲ್ಫ್ ಆರಬ್ ರಾಷ್ಟ್ರಗಳು ಯೆಮೆನ್,ಸಿರಿಯ ಅಥವಾ ತಮ್ಮದೇ ಆದ ಪ್ರಾಂತದಲ್ಲಿ ಸಶಸ್ತ್ರ ಸಂಘರ್ಷದಲ್ಲಿ ನಿರತವಾಗಿರುವುದು ಹಾಗೂ ಇರಾನ್ ಜೊತೆ ಉದ್ವಿಗ್ನ ಸಂಬಂಧಗಳನ್ನು ಹೊಂದಿರುವ ಬಗ್ಗೆ ವರದಿಯು ಗಮನಸೆಳೆದಿದೆ. ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಸೌದಿ ಆರೇಬಿಯದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.212ರಷ್ಟು ಹೆಚ್ಚಳವಾಗಿದ್ದು, ಇದು ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನ ಶೇ.8.2ರಷ್ಟಾಗಿದೆ.

       ಭಾರತವು ತನ್ನ ಎದುರಾಳಿಯಾದ ಅಣ್ವಸ್ತ್ರಶಕ್ತ ರಾಷ್ಟ್ರ ಪಾಕಿಸ್ತಾನ ಹಾಗೂ ದೈತ್ಯಗಾತ್ರದ ಸೇನಾಬಲದ ಚೀನಾದಿಂದ ಗಂಭೀರವಾದ ಬೆದರಿಕೆಯನ್ನು ಎದುರಿಸುತ್ತಿದೆಯೆಂದು ವರದಿಯು ಅಭಿಪ್ರಾಯಿಸಿದೆ. ಏಶ್ಯದಾದ್ಯಂತ ಚೀನಾವು ಹಲವು ಪ್ರದೇಶಗಳಲ್ಲಿ ತನ್ನ ಹಕ್ಕನ್ನು ಸ್ಥಾಪಿಸತೊಡಗಿದೆ ಹಾಗೂ ಪಿಓಕೆ ಪ್ರಾಂತ್ಯ ಸೇರಿದಂತೆ ಪಾಕಿಸ್ತಾನದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಅದು ಬಿಲಿಯಾಂತರ ಡಾಲರ್‌ಗಳನ್ನು ಹೂಡುತ್ತಿದೆ. ಈ ಮಧ್ಯೆ ಹೊಸದಿಲ್ಲಿಯು ಅಮೆರಿಕ ಹಾಗೂ ವಿಯೆಟ್ನಾಂನಂತಹ ಪ್ರಾಂತದ ಇತರ ದೇಶಗಳ ಜೊತೆಗೆ ಗಾಢವಾದ ರಕ್ಷಣಾ ಸಹಕಾರವನ್ನು ಏರ್ಪಡಿಸಿಕೊಳ್ಳಲು ಯತ್ನಿಸುತ್ತಿದೆಯೆಂದು ವರದಿ ಹೇಳಿದೆ.

ಹೆಚ್ಚುತ್ತಿರುವ ಬೆದರಿಕೆಗಳ ಹೊರತಾಗಿಯೂ, ‘ಮೇಕ್ ಇನ್ ಇಂಡಿಯಾ’ ಯೋಜನೆಯು ಸ್ಥಳೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ. ಭಾರತದ ಸ್ವದೇಶ ರಕ್ಷಣಾ ಉದ್ಯಮ ವಲಯವು, ಹೊಸದಿಲ್ಲಿಯ ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಈಡೇರಿಸಲು ಸಮರ್ಥವಾಗಿಲ್ಲವೆಂದು, ಎಸ್‌ಐಪಿಆರ್‌ಐನ ಹಿರಿಯ ಸಂಶೋಧಕರಾದ ಸೈಮನ್ ವೆಝ್‌ಮ್ಯಾನ್ ತಿಳಿಸಿದ್ದಾರೆ.

 ಭಾರತದ ಸ್ವದೇಶಿ ರಕ್ಷಣಾ ಉದ್ಯಮವು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಬಹಳಷ್ಟು ಹಣ ಹಾಗೂ ಸಮಯವನ್ನು ವೆಚ್ಚ ಮಾಡಿತ್ತಾದರೂ, ಅವೆಲ್ಲವೂ ವ್ಯರ್ಥವಾಗಿದ್ದರಿಂದ, ಈಗ ಅದು ಆಮದು ಶಸ್ತ್ರಾಸ್ತ್ರಗಳನ್ನೇ ಹೆಚ್ಚಾಗಿ ಅವಲಂಭಿಸುತ್ತಿದೆಯೆಂದವರು ಹೇಳಿದರು.

 ಭಾರತವು ಶಸ್ತ್ರಾಸ್ತ್ರಗಳ ಅಮದಿಗೆ ಮುಖ್ಯವಾಗಿ ರಶ್ಯ, ಅಮೆರಿಕ ಹಾಗೂ ಇಸ್ರೇಲ್ ದೇಶಗಳನ್ನು ಹೆಚ್ಚಾಗಿ ಅವಲಂಭಿಸಿವೆ. ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತದ ಪಾಲು ಹೆಚ್ಚತೊಡಗಿರುವಂತೆಯೇ, ಚೀನಾವು ತನ್ನ ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ದೇಶಿಯವಾಗಿ ಉತ್ಪಾದಿಸಲು ಹೆಚ್ಚು ಹೆಚ್ಚು ಶಕ್ತವಾಗುತ್ತಿದೆಯೆಂದು ಎಸ್‌ಐಪಿಆರ್‌ಐ ಬಹಿರಂಗಪಡಿಸಿದೆ. 2007 ಹಾಗೂ 2011ರ ಮಧ್ಯೆ ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಚೀನಾದ ಪಾಲು 5.5ರಷ್ಟಿದ್ದರೆ, 2012 ಹಾಗೂ 2016 ಮಧ್ಯೆ ಅದು ಶೇ.5.5ಕ್ಕೆ ಕುಸಿದಿದೆ.

  ಬಂಡುಕೋರರ ಜೊತೆ ಕಾದಾಡುವ, ದೇಶದ ವಿವಾದಾತ್ಮಕ ಗಡಿಗಳನ್ನು ಕಾಯುತ್ತಿರುವ ಹಾಗೂ ಜಂಟಿ ಗಸ್ತುಗಳನ್ನು ನಡೆಸಲು ಹಾಗೂ ಜೊತೆಗಾರ ರಾಷ್ಟ್ರಗಳ ಸೇನೆಗಳೊಂದಿಗೆ ಸಮರಾಭ್ಯಾಸಗಳನ್ನು ನಡೆಸಲು ದೇಶದ ಸೇನಾಪಡೆಗಳಿಗೆ ಬೇಕಾದ ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ತುರ್ತಾಗಿ ಪೂರೈಸಲು ದೇಶೀಯ ರಕ್ಷಣಾ ವಲಯಕ್ಕೆ ಸಾಧ್ಯವಾಗುತ್ತಿಲ್ಲವೆಂದವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X