ಸರಕಾರಿ ಸಂಸ್ಥೆಗಳ ಬಗ್ಗೆ ಪ್ರೀತಿ ಇರಲಿ: ಪ್ರಮೋದ್ ಮಧ್ವರಾಜ್

ಉಡುಪಿ, ಫೆ.21: ನಾವೆಲ್ಲರು ಸರಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಪ್ರೀತಿ ಹಾಗೂ ಕಾಳಜಿ ಹೊಂದಿರಬೇಕು ಹಾಗೂ ತೆಂಕನಿಡಿಯೂರು ಕಾಲೇಜಿನಂತೆ ಇನ್ನಷ್ಟು ಮಾದರಿ ಸಂಸ್ಥೆಗಳನ್ನು ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿ ರ್ಯಾಂಕ್ ವಿಜೇತ ರನ್ನು ಹಾಗೂ ಕ್ರೀಡಾ ಸಾಧಕರನ್ನು ಸನ್ಮಾನಿಸಿ, ಉಪನ್ಯಾಸಕ ಡಾ. ಜಯಪ್ರಕಾಶ್ ಎಚ್. ಇವರ ಕೃತಿ ಱಬೆಳಗಿನೊಳಗಣ ಬೆರಗುೞನ್ನು ಬಿಡುಗಡೆಗೊಳಿಸಿ ಮಾತನಾಡುತಿದ್ದರು.
ಮುಖ್ಯಅತಿಥಿಯಾಗಿಭಾಗವಹಿಸಿದ ಪ್ರೊ.ಬಿ.ಪದ್ಮನಾ ಗೌಡ ಮಾತನಾಡಿ, ಸಮಗ್ರ ವ್ಯಕ್ತಿತ್ವವು ಜ್ಞಾನದೊಂದಿಗೆ ಸಂಸ್ಕೃತಿ ಹಾಗೂ ಸಾಮರಸ್ಯಗಳನ್ನು ಬೆಸೆದಿರುತ್ತದೆ.ಆದುದರಿಂದ ಕಾಲೇಜು ಶಿಕ್ಷಣವು ಸಂಸ್ಕೃತಿ ಹಾಗೂ ಜ್ಞಾನಾರ್ಜನೆ ಗಳೆರಡರ ಮಾರ್ಗವಾಗಬೇಕು. ಜಗತ್ತಿನ ಸಂಸ್ಕೃತಿಯನ್ನು ಸ್ಥಳೀಯ ಜೀವನ ದೊಂದಿಗೆ ಬೆಸೆಯಲು ಇಂಗ್ಲೀಷ್ ಕೌಶಲ್ಯ ಅಗತ್ಯವಾಗಿದ್ದು ಕಾಲೇಜಿನ ದಿನ ಗಳಲ್ಲಿ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಗಮನ ನೀಡುವಂತೆ ಕರೆಯಿತ್ತರು.
ಇದೇ ಸಂದರ್ಭದಲ್ಲಿ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿ ಸಲಾಯಿತು. ಜಿಪಂ ಸದಸ್ಯ ಜನಾರ್ಧನ ತೋನ್ಸೆ ಶುಭ ಹಾರೈಸಿದರು. ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಹೆಗ್ಡೆ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ದಯಾನಂದ ಶೆಟ್ಟಿ ಕೊಜಕುಳಿ ಬಹುಮಾನ ವಿತರಿಸಿದರು.
ಪ್ರಖ್ಯಾತ ಶೆಟ್ಟಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ. ಮಂಜುನಾಥ ಹಾಗೂ ಡಾ.ಎಚ್.ಕೆ.ವೆಂಕಟೇಶ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ದುಗ್ಗಪ್ಪ ಕಜೇಕಾರ್ ಹಾಗೂ ಪ್ರೊ.ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.







