ಮಂಗಳೂರು: ಸುನ್ನೀ ಸಂದೇಶದಿಂದ ಜಬ್ಬಾರ್ ಉಸ್ತಾದರಿಗೆ ಸನ್ಮಾನ

ಮಂಗಳೂರು, ಫೆ. 21: ಸುನ್ನೀ ಸಂದೇಶ ಮಾಸ ಪತ್ರಿಕೆಯ ವತಿಯಿಂದ ಸಮಸ್ತ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರನ್ನು ಸನ್ಮಾನಿಸಲಾಯಿತು.
ಅಲ್‌ಮುಝೈನ್ ಗ್ರೂಪ್‌ನ ಚೇರ್‌ಮ್ಯಾನ್ ಹಾಜಿ ಬಿ.ಝಕರಿಯ್ಯಾ ಹಾಗೂ ನೌಶಾದ್ ಹಾಜಿ ಸೂರಲ್ಪಾಡಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಸಮಾರಂಭದಲ್ಲಿ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕೆ. ಎಲ್.ಉಮರ್ ದಾರಿಮಿ, ಸಿದ್ದೀಕ್ ಫೈಝಿ ಅಬ್ದುಲ್ಲ ಹಾಜಿ ಬೆಳ್ಮ, ಎನ್. ಕೆ. ಅಬೂಬಕರ್ ಕುದ್ರೋಳಿ, ಹಸನ್ ಬೆಂಗರೆ ಹಾಗೂ ಸಮಸ್ತ ಉಲಮ-ಉಮರ ವಿದ್ವಾಂಸರು, ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





